ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕಸ್ಮಿಕ ಕ್ಷಿಪಣಿ ದಾಳಿ: ಪಾಕಿಸ್ತಾನದ ಜಂಟಿ ತನಿಖೆ ಬೇಡಿಕೆಗೆ ಒಐಸಿ ಬೆಂಬಲ

Last Updated 24 ಮಾರ್ಚ್ 2022, 11:39 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಭಾರತದ ಕ್ಷಿಪಣಿಯೊಂದು ಪಾಕಿಸ್ತಾನಕ್ಕೆ ಆಕಸ್ಮಿಕವಾಗಿ ಚಿಮ್ಮಿದ ಘಟನೆಯ ಸತ್ಯಾಂಶವನ್ನು ಸ್ಪಷ್ಟವಾಗಿ ತಿಳಿಯಲು ಜಂಟಿ ತನಿಖೆ ನಡೆಸಬೇಕು ಎಂಬ ಪಾಕಿಸ್ತಾನದ ಬೇಡಿಕೆಯನ್ನು ಇಸ್ಲಾಮಿಕ್‌ ಸಹಕಾರ ಸಂಘಟನೆ (ಒಐಸಿ) ದೇಶಗಳ ವಿದೇಶಾಂಗ ಸಚಿವರು ಬೆಂಬಲಿಸಿದ್ದಾರೆ.

ಇಲ್ಲಿಬುಧವಾರ ನಡೆದ ಒಐಸಿ ವಿದೇಶಾಂಗ ಸಚಿವರ ಮಂಡಳಿಯ 48ನೇ ಸಮಾವೇಶದಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪ್ರಾದೇಶಿಕ ಭದ್ರತೆಯನ್ನು ಗಟ್ಟಿಗೊಳಿಸಲು ಭಾರತವು ಪಾಕಿಸ್ತಾನದೊಂದಿಗೆ ರಚನಾತ್ಮಕವಾಗಿ ಕೆಲಸ ಮಾಡಬೇಕು, ಉಭಯ ದೇಶಗಳ ನಡುವೆ ಬಾಕಿ ಇರುವ ವಿವಾದವನ್ನುಇತ್ಯರ್ಥಪಡಿಸಿಕೊಳ್ಳಲು ಹಾಗೂ ಪಾಕಿಸ್ತಾನದಪ್ರಸ್ತಾವನೆಗೆಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ತಿಳಿಸಿದೆ.

ಭಾರತ ಸೇನೆಯ ಸೂಪರ್‌ಸಾನಿಕ್ ಕ್ಷಿಪಣಿಯೊಂದು ಮಾರ್ಚ್ 9ರಂದು ಆಕಸ್ಮಿಕವಾಗಿ ‍ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮಿಯಾನ್ ಚುನ್ನು ನಗರದ ಸಮೀಪ ನೆಲಕ್ಕೆ ಅಪ್ಪಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT