ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಬಾಂಗ್ಲಾ ತೈಲ ಪೈಪ್‌ಲೈನ್‌: ಇಂಧನ ಭದ್ರತೆಯಲ್ಲಿ ಮುಖ್ಯ ಪಾತ್ರ- ಶೇಖ್‌ ಹಸೀನಾ

Last Updated 19 ಮಾರ್ಚ್ 2023, 12:45 IST
ಅಕ್ಷರ ಗಾತ್ರ

ಢಾಕಾ (ಪಿಟಿಐ): ತೈಲ ಸಾಗಾಣಿಕೆಗೆ ಭಾರತದೊಂದಿಗೆ ಗಡಿಯಾಚೆಗಿನ ಪೈಪ್‌ಲೈನ್‌ ಹೊಂದುವುದು ಇಂಧನ ಭದ್ರತೆ ದೃಷ್ಟಿಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸೀನಾ ಹೇಳಿದರು.

ಬಾಂಗ್ಲಾದೇಶ-ಭಾರತ ನಡುವಿನ ‘ಫ್ರೆಂಡ್‌ಶಿಪ್‌ ಪೈಪ್‌ಲೈನ್‌’ ಅನ್ನು ವರ್ಚುವಲ್‌ ಮೂಲಕ ಹಸೀನಾ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಶನಿವಾರ ಉದ್ಘಾಟಿಸಿದರು. ಈ ಪೈಪ್‌ಲೈನ್‌ 131.5 ಕಿಮೀ ಉದ್ದವಿದೆ.

ಭಾರತ– ಬಾಂಗ್ಲಾ ನಡುವೆ ಉತ್ತಮ ಬಾಂಧವ್ಯವಿದೆ, ಅದು ಹೀಗೆಯೇ ಮುಂದುವರಿಯಬೇಕು ಎಂದರು. ₹377 ಕೋಟಿ ವೆಚ್ಚದಲ್ಲಿ ಪೈಪ್‌ಲೈನ್‌ ನಿರ್ಮಾಣ ಮಾಡಲಾಗಿದ್ದು, ಬಾಂಗ್ಲಾದೇಶವು ಪೆಟ್ರೋಲ್‌, ವಿಶೇಷವಾಗಿ ಭಾರತದಿಂದ ಡೀಸೆಲ್‌ನ್ನು ಆಮದು ಮಾಡಿಕೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT