ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಖ್ ದೇವಾಲಯವಾಗಿ ಪರಿವರ್ತನೆಗೊಂಡ ಕೆನಡಾದ ಹಳೆಯ ಚರ್ಚ್

Last Updated 20 ಜನವರಿ 2023, 8:13 IST
ಅಕ್ಷರ ಗಾತ್ರ

ಟೊರೊಂಟೊ : ಸ್ಥಳೀಯ ಸಿಖ್ ಸಮುದಾಯದ ನಿರಂತರ ವಿನಂತಿ ಮೇರೆಗೆ ಇಲ್ಲಿನ ರೆಡ್ ಡೀರ್ ನಗರದ ಹಳೆಯ ಚರ್ಚ್ ಅನ್ನು ಸಿಖ್ ಆರಾಧನಾ ಸ್ಥಳವಾಗಿ ಪರಿವರ್ತಿಸಲಾಗಿದೆ. 2005 ರಿಂದ ಸ್ಥಳೀಯ ಸಿಖ್ ಸಮುದಾಯ ಈ ಪರಿವರ್ತನೆಗಾಗಿ ವಿನಂತಿಸಿಕೊಂಡು ಬಂದಿತ್ತು.

ಇಲ್ಲಿನ ಕಾರ್ನರ್‌ಸ್ಟೋನ್ ಗಾಸ್ಪೆಲ್ ಚಾಪೆಲ್ ಈಗ ಗುರು ನಾನಕರ ಆರಾಧನೆಯ ಗುರುದ್ವಾರವಾಗಿದೆ ಮತ್ತು ವಾರದಲ್ಲಿ ಏಳು ದಿನಗಳು ಬೆಳಿಗ್ಗೆ 6 ರಿಂದ ರಾತ್ರಿ 8 ರವರೆಗೆ ತೆರೆದಿರುತ್ತದೆ.

ಇದು ಸುಮಾರು 150 ಕುಟುಂಬಗಳು, 250 ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಮತ್ತು ಭಾರತದ ತಾತ್ಕಾಲಿಕ ವಿದೇಶಿ ಉದ್ಯೋಗಿಗಳಿಗೆ ಆರಾಧನೆ ಅವಕಾಶ ನೀಡಲಿದೆ ಎಂದು ಸಿಬಿಸಿ ನ್ಯೂಸ್ ವರದಿ ಮಾಡಿದೆ.

‘ದೇಶದಲ್ಲಿ ಸಿಖ್‌ ಸಮುದಾಯವು ಪ್ರತಿದಿನ ಬೆಳೆಯುತ್ತಿದೆ. ಕ್ಯಾಲ್ಗರಿ ಮತ್ತು ಒಂಟಾರಿಯೊದಂತಹ ಬೇರೆ ನಗರಗಳಿಂದಲೂ ಇಲ್ಲಿಗೆ ಭಕ್ತರು ಆಗಮಿಸುತ್ತಿದ್ದಾರೆ’ ಎಂದು ಗುರುದ್ವಾರದ ಮುಖ್ಯಸ್ಥ ನಿಶಾನ್ ಸಿಂಗ್ ಸಂಧು ತಿಳಿಸಿದ್ದಾರೆ.

‘ಈ ಕಟ್ಟಡ ಇಲ್ಲದಿದ್ದರೆ ನಮಗೆ ಒಟ್ಟಿಗೆ ಸೇರಲು ಹತ್ತಿರದಲ್ಲಿ ಸ್ಥಳವಿರಲಿಲ್ಲ. ಇಲ್ಲೊಂದು ಗುರುದ್ವಾರವನ್ನು ನಿರ್ಮಿಸಲು ನಾವು ಕಳೆದ 20 ವರ್ಷಗಳಿಂದ ಹೆಣಗಾಡಿದ್ದೇವೆ’ ಎಂದು ಸಂಧು ಹೇಳಿದರು.

ಸಮುದಾಯವು ಈ ಕಟ್ಟಡ ಖರೀದಿಗಾಗಿ ಕ್ಯಾಲ್ಗರಿ, ಎಡ್ಮಂಟನ್ ಮತ್ತು ಸರ್ರೆ, ಬ್ರಿಟಿಷ್ ಕೊಲಂಬಿಯಾದಂತಹ ನೆರೆಹೊರೆಯ ಸಿಖ್ ಸಮುದಾಯಗಳಿಂದ ದೇಣಿಗೆ ಪಡೆದಿದೆ., ಜೊತೆಗೆ ಖಾಸಗಿ ವ್ಯಕ್ತಿಗಳಿಂದ 4,50,000, ಡಾಲರ್‌ ದೇಣಿಗೆ ಲಭಿಸಿದೆ. ಹೀಗಾಗಿ ಯಾವುದೇ ಅಡಮಾನವಿಲ್ಲದೆ ಕಟ್ಟಡವನ್ನು ಖರೀದಿಸಲು ಅವಕಾಶ ಸಾಧ್ಯವಾಗಿದೆ ಎಂದು ಅವರು ತಿಳಿಸಿದರು.

ಕಳೆದ ತಿಂಗಳಿನಿಂದ ಆರಂಭಗೊಂಡಿರುವ ಗುರುದ್ವಾರವು ದೊಡ್ಡ ನೆಲಮಾಳಿಗೆಯ ಪ್ರದೇಶ ಮತ್ತು ಅಡುಗೆಮನೆಯೊಂದಿಗೆ ಒಂದು ಮಹಡಿಯನ್ನು ಒಳಗೊಂಡಿದೆ. ಕೇಂದ್ರದ ಅಡುಗೆಮನೆಯು ಸಂದರ್ಶಕರಿಗೆ ಮತ್ತು ಅಗತ್ಯವಿರುವ ಯಾರಿಗಾದರೂ ಉಚಿತ ಸಸ್ಯಾಹಾರಿ ಊಟವನ್ನು ಒದಗಿಸುತ್ತದೆ.

‘ಇಲ್ಲಿನ ಜನರಿಗೆ ಪೇಟದ ಬಗ್ಗೆ ತಿಳಿದಿರಲಿಲ್ಲ. ಸಿಖ್ ಧರ್ಮದ ಬಗ್ಗೆ ಗೊತ್ತಿಲ್ಲ. ಈಗ, ಕನಿಷ್ಠ ನಾವು ಯಾರೆಂದು ಅವರಿಗೆ ತಿಳಿದಿದೆ’ ಎಂದು ಗುರುದ್ವಾರದ ಉಪಾಧ್ಯಕ್ಷ ಗುರುಚರಣ್ ಸಿಂಗ್ ಗಿಲ್ ತಿಳಿಸಿದ್ದಾರೆ.

ಈ ವರ್ಷ 'ನಗರ ಕೀರ್ತನೆ' ಮೆರವಣಿಗೆಯನ್ನು ಆಯೋಜಿಸಲು ಮತ್ತು ಈ ಮೂಲಕ ಸಮುದಾಯ ಅಸ್ತಿತ್ವ ವೃದ್ಧಿಗೆ ಆಲೋಚಿಸಿದ್ದೇವೆ ಎಂದು ಗಿಲ್ ಹೇಳಿದ್ದಾರೆ.

ಅಲ್ಬರ್ಟಾ ಪ್ರಾಂತ್ಯದ ರೆಡ್ ಡೀರ್ ಕೌಂಟಿ ಕಳೆದ ವರ್ಷ ಆಗಸ್ಟ್‌ನಲ್ಲಿ ಗುರುದ್ವಾರದ ವಿನಂತಿ ಅನುಮೋದಿಸಿತ್ತು. ಸಿಖ್ ಸಮುದಾಯವು ಕಳೆದ ತಿಂಗಳು ಕಟ್ಟಡವನ್ನು ಸ್ವಾಧೀನಪಡಿಸಿಕೊಂಡಿತು. ಈ ಹಿಂದೆ, ಸಿಖ್ ಕುಟುಂಬಗಳು ತಿಂಗಳಿಗೊಮ್ಮೆ ಕೆನಡಾದ ಬೋವರ್ ಸಮುದಾಯ ಕೇಂದ್ರದಲ್ಲಿ ಪ್ರಾರ್ಥನೆಗಾಗಿ ಸೇರುತ್ತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT