ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಮೈಕ್ರಾನ್‌ ಪ್ರಕರಣಗಳ ಸಂಖ್ಯೆ ಮೂರು ದಿನಗಳಲ್ಲಿ ದ್ವಿಗುಣ: WHO ಎಚ್ಚರಿಕೆ

ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳ ಸಾಧ್ಯತೆ * ಆಸ್ಪತ್ರೆಗಳ ಮೇಲೆ ಒತ್ತಡ– ಡಬ್ಲ್ಯೂಎಚ್‌ಒ ಎಚ್ಚರಿಕೆ
Last Updated 18 ಡಿಸೆಂಬರ್ 2021, 15:25 IST
ಅಕ್ಷರ ಗಾತ್ರ

ಜಿನಿವಾ: ಕೊರೊನಾ ವೈರಸ್‌ನ ಓಮೈಕ್ರಾನ್ ತಳಿ ಸೋಂಕಿನ ಪ್ರಕರಣಗಳು ವಿಶ್ವದ 89 ರಾಷ್ಟ್ರಗಳಲ್ಲಿ ವರದಿಯಾಗಿವೆ. ಸಮುದಾಯ ಮಟ್ಟದಲ್ಲಿ ಈ ತಳಿಯ ಸೋಂಕಿನ ಪ್ರಕರಣಗಳ ಸಂಖ್ಯೆ ಒಂದೂವರೆಯಿಂದ ಮೂರು ದಿನಗಳ ಅವಧಿಯಲ್ಲಿ ದ್ವಿಗುಣಗೊಳ್ಳುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಶನಿವಾರ ಹೇಳಿದೆ.

ಓಮೈಕ್ರಾನ್‌ ಬಹಳ ವೇಗವಾಗಿ ಪ್ರಸರಣವಾಗುತ್ತಿದೆ. ಕೆಲ ದೇಶಗಳಲ್ಲಿ ರೋಗಿಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿ, ಆಸ್ಪತ್ರೆಗಳ ಮೇಲೆ ಒತ್ತಡಕ್ಕೆ ಕಾರಣವಾಬಹುದು ಎಂದೂ ಡಬ್ಲ್ಯೂಎಚ್‌ಒ ಎಚ್ಚರಿಸಿದೆ.

ವ್ಯಕ್ತಿಯ ದೇಹದಲ್ಲಿನ ರೋಗನಿರೋಧಕ ಶಕ್ತಿಯಿಂದ ತಪ್ಪಿಸಿಕೊಳ್ಳುವ ಸಾಮರ್ಥ್ಯವನ್ನು ವೈರಸ್ ಹೊಂದಿರುವುದು, ವೇಗವಾಗಿ ಪ್ರಸರಣವಾಗುವ ಅದರ ಮೂಲಗುಣ ಅಥವಾ ಈ ಎರಡೂ ಗುಣಗಳು ವೈರಸ್‌ ವೇಗವಾಗಿ ಪ್ರಸರಣವಾಗಲು ಕಾರಣವಾಗಿರಬಹುದೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಹೇಳಿದೆ.

‘ಓಮೈಕ್ರಾನ್‌ನಿಂದಾಗುವ ಸೋಂಕಿನ ತೀವ್ರತೆ ಕುರಿತು ಕ್ಲಿನಿಕಲ್‌ ಅಧ್ಯಯನದಿಂದ ಲಭಿಸಿರುವ ಮಾಹಿತಿ ಅತ್ಯಲ್ಪ. ವ್ಯಕ್ತಿಯ ದೇಹದಲ್ಲಿನ ರೋಗನಿರೋಧಕ ಶಕ್ತಿ ಹಾಗೂ ಲಸಿಕೆಯು ಸೋಂಕಿನ ತೀವ್ರತೆಯನ್ನು ಎಷ್ಟರ ಮಟ್ಟಿಗೆ ತಗ್ಗಿಸಲು ನೆರವಾಗಲಿದೆ ಎಂಬುದನ್ನು ವಿವರಿಸಲು ಇನ್ನಷ್ಟು ಮಾಹಿತಿಯ ಅಗತ್ಯ ಇದೆ’ ಎಂದೂ ಡಬ್ಲ್ಯೂಎಚ್‌ಒ ಅಭಿಪ್ರಾಯಪಟ್ಟಿದೆ.


* ಅತಿ ವೇಗವಾಗಿ ಪ್ರಸರಣ ಸಾಮರ್ಥ್ಯ ಹೊಂದಿರುವ ಓಮೈಕ್ರಾನ್‌ ತಳಿಯ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಕಾರಣ, ಯುರೋಪ್‌ ರಾಷ್ಟ್ರಗಳು ಕಠಿಣ ಕ್ರಮಗಳನ್ನು ಜಾರಿಗೊಳಿಸಲು ಮುಂದಾಗಿವೆ.

* ಆಸ್ಟ್ರಿಯಾ ಸರ್ಕಾರ ಪ್ರಯಾಣದ ಮೇಲೆ ನಿರ್ಬಂಧ ಹೇರಿದೆ. ಡೆನ್ಮಾರ್ಕ್‌ನಲ್ಲಿ ಥಿಯೇಟರ್‌ಗಳು, ಮನರಂಜನಾ ಪಾರ್ಕ್‌ ಹಾಗೂ ಮ್ಯೂಸಿಯಂಗಳನ್ನು ಮುಚ್ಚಲಾಗಿದೆ.

* ಐರ್ಲೆಂಡ್‌ನಲ್ಲಿ ಒಳಾಂಗಣ ಹಾಗೂ ಹೊರಾಂಗಣ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಜನರ ಸಂಖ್ಯೆಯ ಮೇಲೆ ಮಿತಿ ಹೇರಲಾಗಿದೆ.

* ಓಮೈಕ್ರಾನ್‌ ತಳಿ ಸೋಂಕು ಪ್ರಸರಣ ತಡೆಯುವ ಸಲುವಾಗಿ ಬ್ರಿಟನ್‌ ಸರ್ಕಾರ ಕ್ರಿಸ್‌ಮಸ್‌ ನಂತರ ಎರಡು ವಾರ ಕಾಲ ಲಾಕ್‌ಡೌನ್‌ ಜಾರಿಗೊಳಿಸಲು ಮುಂದಾಗಿದೆ.

* ಬ್ರಿಟನ್‌ನಲ್ಲಿ ಕೊರೊನಾ ವೈರಸ್‌ನ ಡೆಲ್ಟಾ ತಳಿ ಸೋಂಕು ವ್ಯಾಪಕವಾಗಿ ಹರಡಿದೆ. ಆದರೆ, ಲಂಡನ್‌ ಮತ್ತು ಸ್ಕಾಟ್ಲೆಂಡ್‌ನಲ್ಲಿ ಈಗ ಓಮೈಕ್ರಾನ್‌ ಪ್ರಕರಣಗಳು ಅಧಿಕವಾಗಿ ವರದಿಯಾಗುತ್ತಿವೆ.

* ಕ್ರಿಸ್‌ಮಸ್‌ ಹಾಗೂ ಹೊಸವರ್ಷಕ್ಕೂ ಮುನ್ನ ಎಲ್ಲರೂ ಲಸಿಕೆ ಹಾಕಿಸಿಕೊಳ್ಳುವಂತೆ ಜನರಿಗೆ ಫ್ರಾನ್ಸ್‌ ಸರ್ಕಾರ ಸೂಚಿಸಿದೆ. ಸಾರ್ವಜನಿಕ ಸಭೆಗಳನ್ನು, ಹೊಸ ವರ್ಷಾಚರಣೆ, ದೊಡ್ಡ ಸಂಖ್ಯೆಯಲ್ಲಿ ಜನರು ಒಂದೆಡೆ ಸೇರುವುದನ್ನು ಸಹ ನಿರ್ಬಂಧಿಸಲಾಗಿದೆ.

* ಈಜಿಪ್ಟ್‌ನಲ್ಲಿ ಕೊರೊನಾ ವೈರಸ್‌ ಓಮೈಕ್ರಾನ್‌ ತಳಿ ಸೋಂಕಿನ ಮೂರು ಪ್ರಕರಣಗಳು ವರದಿಯಾಗಿವೆ. ಇವು ದೇಶದಲ್ಲಿ ವರದಿಯಾದ ಈ ತಳಿ ಸೋಂಕಿನ ಮೊದಲ ಪ್ರಕರಣಗಳಾಗಿವೆ.

* ಪೋರ್ಚುಗಲ್‌ನಲ್ಲಿಯೂ ಪ್ರಕರಣಗಳು ಹೆಚ್ಚುತ್ತಿದ್ದು, ಲಸಿಕೆ ನೀಡಿಕೆಗೆ ವೇಗ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT