ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯ ದಿನ: ಮೋದಿ, ಮುರ್ಮುಗೆ ಪತ್ರ ಬರೆದ ಅಮೆರಿಕ ಅಧ್ಯಕ್ಷ ಜೋ ಬೈಡನ್‌

Last Updated 16 ಆಗಸ್ಟ್ 2022, 14:24 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಭಾರತದ ಸ್ವಾತಂತ್ರ್ಯ ದಿನದ ಪ್ರಯುಕ್ತ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಪ್ರತ್ಯೇಕ ಪತ್ರ ಬರೆದಿದ್ದಾರೆ.

ಇಂಡಿಯಾ ಹೌಸ್‌ನಲ್ಲಿ ಸೋಮವಾರ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ ವೇಳೆ ಬಂದಿದ್ದ ವಿದೇಶಾಂಗ ಉಪಕಾರ್ಯದರ್ಶಿ ಬ್ರೈನ್‌ ಪಿ ಮ್ಯಾಕೆನ್‌ ಅವರು, ಅಮೆರಿಕದಲ್ಲಿರುವ ಭಾರತದ ರಾಯಭಾರಿ ತರನ್‌ಜಿತ್‌ ಸಿಂಗ್‌ ಸಂಧು ಅವರಿಗೆ ಈ ಪತ್ರಗಳನ್ನು ನೀಡಿದರು.

ಈ ಸಮಾರಂಭದಲ್ಲಿ ಮಾತನಾಡಿದ ಅವರು, ‘ನಾನು ಇಲ್ಲಿ ಮಾತನಾಡುವುದಕ್ಕಿಂತ ಬೈಡನ್‌ ಅವರು ಬರೆದ ಪತ್ರಗಳನ್ನು ಓದಿಬಿಡಬಹುದು. ಯಾಕೆಂದರೆ ಅದು ಅಷ್ಟು ಸ್ಪಷ್ಟವಾಗಿರುತ್ತದೆ. ಕೆಲವು ಸಂಬಂಧಗಳು ಪ್ರಮುಖವಾಗಿರುತ್ತವೆ; ಪರಿಣಾಮಕಾರಿಯಾಗಿರುತ್ತದೆ. ಅಮೆರಿಕ ಮತ್ತು ಭಾರತದ ಸಂಬಂಧವು ಇದೇ ರೀತಿಯದ್ದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT