ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾನ್‌ ಪ್ರತಿಭಟನಕಾರನಿಗೆ ಗಲ್ಲು: ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರೋಧ ವ್ಯಕ್ತ

Last Updated 8 ಡಿಸೆಂಬರ್ 2022, 16:28 IST
ಅಕ್ಷರ ಗಾತ್ರ

ಪ್ಯಾರಿಸ್‌: ಸೆಪ್ಟೆಂಬರ್‌ನಿಂದ ಆಡಳಿತವನ್ನು ಅಲುಗಾಡಿಸಿರುವ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಇರಾನ್ ಸರ್ಕಾರವು ಗುರುವಾರ ಪ್ರತಿಭಟನಕಾರ ಮೊಹಸೇನ್ ಶೇಕರಿ ಎಂಬುವವರಿಗೆ ಮರಣದಂಡನೆ ವಿಧಿಸಿದೆ.

ಇದರಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಕ್ರೋಧ ವ್ಯಕ್ತವಾಗಿದೆ. ಈ ಮರಣದಂಡನೆ ತೀರ್ಪಿನಿಂದಾಗಿ ಕನಿಷ್ಠ 12 ಮಂದಿ ಪ್ರತಿಭಟನಕಾರರ ಜೀವ ಅಪಾಯದಲ್ಲಿದೆ ಎಂದು ಮಾನವ ಹಕ್ಕುಗಳ ಆಯೋಗ ಎಚ್ಚರಿಸಿದೆ.

ಸೆಪ್ಟೆಂಬರ್‌ ತಿಂಗಳ ಆರಂಭದಲ್ಲಿ ಪ್ರತಿಭಟನೆ ನಡೆಸುವ ವೇಳೆ, ರಸ್ತೆಯೊಂದನ್ನು ನಿರ್ಬಂಧಿಸಿದ್ದ ಹಾಗೂ ಪ್ಯಾರಾಮಿಲಿಟರಿ ಸಿಬ್ಬಂದಿ ಗಾಯಗೊಳಿಸಿದ್ದ ಕಾರಣಕ್ಕೆಮೊಹಸೇನ್ ಶೇಕರಿಗೆ ಮರಣದಂಡನೆ ವಿಧಿಸಲಾಗಿತ್ತು.

ಇರಾನ್‌ನ ಖುರ್ದಿಶ್‌ ಪ್ರಾಂತ್ಯದ ಮಾಶಾ ಅಮೀನಿ ಎಂಬ ಯವತಿಯ ಸಾವಿನ ಹಿನ್ನೆಲೆಯಲ್ಲಿ ಸುಮಾರು ಮೂರು ತಿಂಗಳಿನಿಂದ ಪ್ರತಿಭಟನೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT