ಶುಕ್ರವಾರ, ಮೇ 27, 2022
27 °C

ಫ್ರಾನ್ಸ್‌: ಹಕ್ಕಿ ಜ್ವರ ಹೆಚ್ಚಳ, 1.3 ಕೋಟಿ ಪಕ್ಷಿಗಳ ಸಂಹಾರ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಪ್ಯಾರಿಸ್‌ (ರಾಯಿಟರ್ಸ್‌): ಫ್ರಾನ್ಸ್‌ನಲ್ಲಿ ವ್ಯಾಪಕವಾಗಿ ಹರಡುತ್ತಿರುವ ಹಕ್ಕಿಜ್ವರದ ತಡೆಗೆ ನವೆಂಬರ್‌ ಅಂತ್ಯದಿಂದ ಇದುವರೆಗೆ ಸುಮಾರು 1.3 ಕೋಟಿಗೂ ಹೆಚ್ಚು ಕೋಳಿ, ಪಕ್ಷಿಗಳನ್ನು ಕೊಲ್ಲಲಾಗಿದೆ ಎಂದು ಕೃಷಿ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾಡು ಹಕ್ಕಿಗಳು ದೇಶಕ್ಕೆ ವಲಸೆ ಬಂದ ನಂತರದಲ್ಲಿ ಪಕ್ಷಿಗಳಲ್ಲಿ ವೈರಸ್‌ ಹರಡುವ ಪ್ರಮಾಣ ಹೆಚ್ಚಾಗಿದೆ. ಫ್ರಾನ್ಸ್‌ನ ಅತಿದೊಡ್ಡ ಕೋಳಿ ಉತ್ಪಾದನಾ ಸ್ಥಳದ ಮೇಲೆ ವೈರಸ್‌ ದಾಳಿ ಇಟ್ಟ ನಂತರ ಸೋಂಕು ಹರಡುವಿಕೆಯನ್ನು ತಡೆಯಲು ಕೋಳಿ, ಪಕ್ಷಿಗಳ ಸಂಹಾರ ಹೆಚ್ಚಾಗಿದೆ. 

ವೈರಸ್‌ ಕಾಣಿಸಿಕೊಂಡ ನವೆಂಬರ್‌ 26 ರಿಂದ ಏಪ್ರಿಲ್‌ 8 ರವರೆಗೆ ಕೃಷಿ ಪ್ರದೇಶಗಳಲ್ಲಿ 1,230 ಹಕ್ಕಿಜ್ವರ ಪ್ರಕರಣಗಳು ದಾಖಲಾಗಿವೆ. 8 ದಿನಗಳಲ್ಲಿ ಸೋಂಕಿನ ಪ್ರಮಾಣ ಶೇ 10 ರಷ್ಟು ಹೆಚ್ಚಾಗಿದೆ ಎಂದು ಕೃಷಿ ಸಚಿವಾಲಯದ ಜಾಲತಾಣ ಹೇಳಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.