ಬುಧವಾರ, ಮೇ 18, 2022
28 °C

ಪಾಕಿಸ್ತಾನ| ನಟ ದಿಲೀಪ್‌ ಕುಮಾರ್‌ ಪೂರ್ವಜರ ಮನೆ ಮಾರಾಟಕ್ಕೆ ಒಪ್ಪದ ಮಾಲೀಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪೆಶಾವರ: ಖ್ಯಾತ ಚಿತ್ರನಟ ದಿಲೀಪ್‌ ಕುಮಾರ್‌ ಅವರ ಪೂರ್ವಜರ ಮನೆಯನ್ನು ಸರ್ಕಾರ ನಿಗದಿಪಡಿಸಿರುವ ದರದಲ್ಲಿ ಮಾರಾಟ ಮಾಡಲು ಅದರ ಮಾಲೀಕ ನಿರಾಕರಿಸಿದ್ದಾರೆ.

ಪಾಕಿಸ್ತಾನದ ಖೈಬರ್‌ ಪಖ್‌ತುನ್‌ಖ್ವಾ ಪ್ರಾಂತ್ಯದಲ್ಲಿರುವ ಈ ಮನೆಗೆ ₹25 ಕೋಟಿ ನೀಡಬೇಕು ಎಂದು ಮನೆಯ ಮಾಲೀಕ ಹಾಜಿ ಲಾಲ್‌ ಮುಹಮ್ಮದ್‌ ಬೇಡಿಕೆ ಇಟ್ಟಿದ್ದಾರೆ. ಅಧಿಕಾರಿಗಳು ಈ ಮನೆಗೆ ಕಡಿಮೆ ದರ ನಿಗದಿಪಡಿಸಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

ಸರ್ಕಾರವು ಕಳೆದ ತಿಂಗಳು ಈ ಮನೆಯನ್ನು ಪಾರಂಪರಿಕ ಮನೆಯೆಂದು ಘೋಷಿಸಿ, ₹80.56 ಲಕ್ಷ ಬೆಲೆ ನಿಗದಿ ಮಾಡಿತ್ತು.

'2005ರಲ್ಲಿ ₹51 ಲಕ್ಷಕ್ಕೆ ಈ ಆಸ್ತಿಯನ್ನು ಖರೀದಿಸಿದ್ದೇನೆ. ಇದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ನನ್ನ ಬಳಿ ಇವೆ' ಎಂದು ಮುಹಮ್ಮದ್‌ ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು