ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ ಸಂಶೋಧನಾ ಕೇಂದ್ರ ಸ್ಥಾಪನೆಗೆ ಪೂನಾವಾಲಾ ಕುಟುಂಬದಿಂದ ಆರ್ಥಿಕ ನೆರವು

Last Updated 16 ಡಿಸೆಂಬರ್ 2021, 11:40 IST
ಅಕ್ಷರ ಗಾತ್ರ

ಲಂಡನ್: ವಿವಿಧ ಲಸಿಕೆಗಳ ಕುರಿತು ಸಂಶೋಧನೆ ಕೈಗೊಳ್ಳುವ ಸಂಬಂಧ ಭಾರತದ ಸೀರಂ ಲೈಫ್‌ ಸೈನ್ಸಸ್‌ ಸಂಸ್ಥೆಯ ಆರ್ಥಿಕ ನೆರವಿನೊಂದಿಗೆ ಇಲ್ಲಿ ‘ಪೂನಾವಾಲಾ ವ್ಯಾಕ್ಸಿನ್ಸ್ ರಿಸರ್ಚ್ ಬಿಲ್ಡಿಂಗ್‌’ ಎಂಬ ನೂತನ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಘೋಷಿಸಿದೆ.

‘ವಿಶ್ವವಿದ್ಯಾಲಯದ ಓಲ್ಡ್‌ ರೋಡ್ ಕ್ಯಾಂಪಸ್‌ನಲ್ಲಿ ಈ ಕೇಂದ್ರವನ್ನು ಸ್ಥಾಪಿಸಲಾಗುವುದು. 300ಕ್ಕೂ ಅಧಿಕ ವಿಜ್ಞಾನಿಗಳು ಸಂಶೋಧನೆ–ಅಧ್ಯಯನ ನಡೆಸಲು ಬೇಕಾದ ಸೌಲಭ್ಯಗಳು ಈ ಕೇಂದ್ರದಲ್ಲಿ ಇರಲಿವೆ. ಈ ಯೋಜನೆಗೆ ಸೀರಂ ಲೈಫ್‌ ಸೈನ್ಸಸ್‌ ₹ 505 ಕೋಟಿ (50 ಮಿಲಿಯನ್‌ ಪೌಂಡ್) ನೆರವು ನೀಡಲಿದೆ’ ಎಂದು ವಿಶ್ವವಿದ್ಯಾಲಯ ತಿಳಿಸಿದೆ.

ಸೀರಂ ಲೈಫ್ ಸೈನ್ಸಸ್‌ ಸಂಸ್ಥೆ ಅದಾರ್‌ ಪೂನಾವಾಲಾ ಕುಟುಂಬದ ಒಡೆತನದಲ್ಲಿದೆ. ಸೀರಂ ಇನ್ಸ್‌ಟಿಟ್ಯೂಟ್‌ ಆಫ್ ಇಂಡಿಯಾ (ಎಸ್‌ಐಐ) ಕೂಡ ಇದೇ ಕುಟುಂಬಕ್ಕೆ ಸೇರಿದ್ದು.

‘ಲಸಿಕೆಗಳ ಕುರಿತು ಸಂಶೋಧನೆ ಕೈಗೊಳ್ಳಲು ಈ ಉದಾರ ಕೊಡುಗೆ ಲಭಿಸಿರುವುದಕ್ಕೆ ನನಗೆ ಸಂತಸವಾಗಿದೆ. ಜಾಗತಿಕವಾಗಿ ಅಗತ್ಯವಿರುವ ಲಸಿಕೆಗಳ ಅಭಿವೃದ್ಧಿಗೆ ಶ್ರಮಿಸಲು ಇದರಿಂದ ನಮಗೆ ಮತ್ತಷ್ಟು ಶಕ್ತಿ ಸಿಗಲಿದೆ’ ಎಂದು ವಿಶ್ವವಿದ್ಯಾಲಯದ ಕುಲಪತಿ ಲೂಯಿಸ್ ರಿಚರ್ಡಸನ್ ಪ್ರತಿಕ್ರಿಯಿಸಿದ್ದಾರೆ.

ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿರುವ ಕೋವಿಡ್‌ ಲಸಿಕೆ ಕೋವಿಶೀಲ್ಡ್‌ ಅನ್ನು ಪುಣೆಯಲ್ಲಿರುವ ಸಿಐಐ ಉತ್ಪಾದಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT