ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದಕದ್ರವ್ಯ, ಶಸ್ತ್ರಾಸ್ತ್ರವಿದ್ದ ಪಾಕ್‌ ದೋಣಿ ವಶ: 10 ಮಂದಿ ಬಂಧನ

Last Updated 26 ಡಿಸೆಂಬರ್ 2022, 20:14 IST
ಅಕ್ಷರ ಗಾತ್ರ

ಅಹಮದಾಬಾದ್‌: ₹300 ಕೋಟಿ ಮೌಲ್ಯದ 40 ಕೆ.ಜಿ. ಮಾದಕದ್ರವ್ಯ, ಅಪಾರ ಶಸ್ತ್ರಾಸ್ತ್ರಗಳು, ಮದ್ದು ಗುಂಡುಗಳನ್ನು ತುಂಬಿಕೊಂಡುಗುಜರಾತ್‌ನ ಕರಾವಳಿ ಸಮುದ್ರ ಪ್ರವೇಶಿಸಿದ್ದ ಪಾಕಿಸ್ತಾನದ ಮೀನುಗಾರಿಕಾ ದೋಣಿಯನ್ನು ಭಾರತೀಯ ಕರಾವಳಿ ಕಾವಲು ಪಡೆ (ಐಸಿಜಿ) ಸೋಮವಾರ ನಸುಕಿನಲ್ಲಿ ವಶಕ್ಕೆ ಪಡೆದಿದೆ. ದೋಣಿಯಲ್ಲಿದ್ದ ಪಾಕಿಸ್ತಾನದ 10 ಮಂದಿಯನ್ನು ಬಂಧಿಸಲಾಗಿದೆ.

ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಜಿಎಟಿಎಸ್‌) ನೀಡಿದ ಸುಳಿವು ಆಧರಿಸಿ ಐಸಿಜಿಯು ತನ್ನ ವೇಗದ ‘ಐಸಿಜಿಎಸ್ ಅರಿಂಜಯ್’ ಗಸ್ತು ಹಡಗನ್ನು ಕಾರ್ಯಾಚರಣೆಗೆ ನಿಯೋಜಿಸಿತ್ತು.

ಡಿ.25 ಮತ್ತು 26ರ ಮಧ್ಯ ರಾತ್ರಿ ಅಂತರರಾಷ್ಟ್ರೀಯ ಸಾಗರ ಗಡಿ ಮಾರ್ಗಕ್ಕೆ ಹತ್ತಿರದ ಪ್ರದೇಶದಲ್ಲಿ ಗಸ್ತು ನಡೆಸುವಾಗ, ಪಾಕ್‌ನ ‘ಅಲ್‌ ಸೊಹೆಲಿ’ ಹೆಸರಿನ ಮೀನುಗಾರಿಕಾ ದೋಣಿ ಭಾರತದ ಜಲಪ್ರದೇಶದಲ್ಲಿ ಶಂಕಾಸ್ಪದವಾಗಿ ಸಂಚರಿಸುತ್ತಿತ್ತು. ದೋಣಿ ಬೆನ್ನಟ್ಟಿ ಎಚ್ಚರಿಕೆಯ ಗುಂಡು ಹಾರಿಸಿ, ವಶಪಡಿಸಿಕೊಳ್ಳಲಾಯಿತು. ಬಂಧಿತರು ಮತ್ತು ದೋಣಿಯನ್ನು ತನಿಖೆಗಾಗಿ ಓಖಾ ಬಂದರಿಗೆ ತರಲಾಗುವುದು ಎಂದುಐಸಿಜಿ ಹೇಳಿಕೆ ಬಿಡುಗಡೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT