ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆ. 10ರೊಳಗೆ ಶರಣಾಗಲು ನವಾಜ್ ಷರೀಫ್‌ಗೆ ಪಾಕ್ ಕೋರ್ಟ್ ಸೂಚನೆ

ಕೊನೆಯ ಅವಕಾಶ ನೀಡಿದ ನ್ಯಾಯಾಲಯ
Last Updated 1 ಸೆಪ್ಟೆಂಬರ್ 2020, 13:38 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ಭ್ರಷ್ಟಾಚಾರ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್‌ ಅವರಿಗೆ ಸೆ.10ರೊಳಗೆ ನ್ಯಾಯಾಲಯಕ್ಕೆ ಹಾಜರಾಗಬೇಕು ಇಲ್ಲವೇ ಶರಣಾಗಬೇಕು ಎಂದು ಪಾಕಿಸ್ತಾನದ ನ್ಯಾಯಾಲಯ ಕೊನೆಯ ಅವಕಾಶ ನೀಡಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ನ್ಯಾಯಮೂರ್ತಿ ಅಮೀರ್ ಫಾರೂಕ್ ಮತ್ತು ನ್ಯಾಯಮೂರ್ತಿ ಮೊಹ್ಸಿನ್ ಅಖ್ತರ್ ಕಯಾನಿ ಅವರನ್ನೊಳಗೊಂಡ ಇಸ್ಲಾಮಾಬಾದ್ ಹೈಕೋರ್ಟ್‌ನ ದ್ವಿಸದಸ್ಯತ್ವದ ವಿಶೇಷ ಪೀಠವು, ಮಂಗಳವಾರ ನವಾಜ್ ಷರೀಫ್, ಅವರ ಮಗಳು ಮರಿಯಂ ನವಾಜ್ ಮತ್ತು ಅಳಿಯ ಕ್ಯಾಪ್ಟನ್ (ನಿವೃತ್ತ) ಸಫ್ದರ್ ಅವರ ವಿರುದ್ಧದ ಪ್ರಕರಣಗಳನ್ನು ಆಲಿಸಿತು.

ನಂತರ,‘ ಮುಂದಿನ ವಿಚಾರಣೆಗೂ (ಸೆ. 10) ಮೊದಲು ಶರಣಾಗುವಂತೆ ನಾವು ನಿಮಗೆ (ನವಾಜ್) ಕೊನೆಯ ಅವಕಾಶವನ್ನು ನೀಡುತ್ತಿದ್ದೇವೆ. ಯಾವುದೇ ಸಂದರ್ಭದಲ್ಲಿ ನವಾಜ್ ಷರೀಫ್ ನ್ಯಾಯಾಲಯಕ್ಕೆ ಹಾಜರಾಗಬೇಕು’ ಎಂದು ನ್ಯಾಯಪೀಠ ಹೇಳಿದೆ.

‘ನವಾಜ್ ಷರೀಫ್ ಅವರು ಪಾಕಿಸ್ತಾನಕ್ಕೆ ಮರಳುವಷ್ಟು ಇನ್ನೂ ಚೇತರಿಸಿಕೊಂಡಿಲ್ಲ. ಅದಕ್ಕೆ ಸಂಬಂಧಿಸಿದ ಅರ್ಜಿ ಲಾಹೋರ್ ಹೈಕೋರ್ಟ್‌ನಲ್ಲಿ ಇನ್ನೂ ಬಾಕಿ ಇದೆ’ ಎಂದು ಷರೀಫ್ ಪರ ವಕೀಲ ಖ್ವಾಜಾ ಹ್ಯಾರಿಸ್ ಪ್ರತಿಪಾದಿಸಿದರು.

ಪ್ರಕರಣದ ವಿಚಾರಣೆಯನ್ನು ಸೆ. 10ಕ್ಕೆ ಮುಂದೂಡಲಾಗಿದೆ.

ಅಲ್ ಅಜೀಜಾ ಸ್ಟೀಲ್ ಮಿಲ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನವಾಜ್ ಷರೀಫ್ ಅವರಿಗೆ ನ್ಯಾಯಾಲಯ ಮೂರು ಬಾರಿ ಏಳು ವರ್ಷಗಳ ಶಿಕ್ಷೆ ವಿಧಿಸಿದೆ. ಕಳೆದ ನವೆಂಬರ್‌ನಿಂದ ಷರೀಫ್ ಅವರು ಲಂಡನ್‌ನಲ್ಲಿದ್ದಾರೆ. ಹೃದಯದ ಚಿಕಿತ್ಸೆಗಾಗಿ ವಿದೇಶದಲ್ಲಿ ನಾಲ್ಕು ವಾರಗಳ ಕಾಲ ಇರಲು ಲಾಹೋರ್ ಹೈಕೋರ್ಟ್ ಅವರಿಗೆ ಅನುಮತಿ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT