ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಮ್ರಾನ್‌ ಖಾನ್‌ ಭಾಷಣದ ನೇರ ಪ್ರಸಾರ ನಿಷೇಧಿಸಿದ ಪಾಕಿಸ್ತಾನ ಮಾಧ್ಯಮ

Last Updated 21 ಆಗಸ್ಟ್ 2022, 11:07 IST
ಅಕ್ಷರ ಗಾತ್ರ

ಇಸ್ಲಮಾಬಾದ್‌ (ಪಿಟಿಐ): ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಭಾಷಣಗಳನ್ನು ನೇರ ಪ್ರಸಾರ ಮಾಡುವುದನ್ನು ಪಾಕಿಸ್ತಾನದ ಸುದ್ದಿ ವಾಹಿನಿಗಳು ನಿಷೇಧಿಸಿವೆ.

ಇಮ್ರಾನ್‌ ಖಾನ್‌ ಅವರ ಭಾಷಣಗಳು ದೇಶದ ಶಾಂತಿ ಸುವ್ಯವಸ್ಥೆಯನ್ನು ಕೆಡಿಸುವಂತಿವೆ ಎಂದುಪಾಕಿಸ್ತಾನ ಎಲೆಕ್ಟ್ರಾನಿಕ್‌ ಮೀಡಿಯಾ ರೆಗ್ಯೂಲೇಟರಿ ಅಥಾರಿಟಿ (ಪಿಇಎಂಆರ್‌ಎ) ಅಭಿಪ್ರಾಯಪಟ್ಟಿದೆ. ಆದ್ದರಿಂದ ಅವರ ಭಾಷಣಗಳನ್ನು ತಿದ್ದುಪಡಿ ಮಾಡದೆ, ತಮ್ಮ ವಾಹಿನಿಗಳಲ್ಲಿ ಪ್ರಸಾರ ಮಾಡಬಾರದು ಎಂದು ಸುದ್ದಿ ವಾಹಿನಿಗಳಿಗೆ ಪಿಇಎಂಆರ್‌ಎ ಸೂಚನೆ ನೀಡಿದೆ.

ಶನಿವಾರ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಇಮ್ರಾನ್‌ ಖಾನ್‌ ಅವರು, ಪೊಲೀಸ್‌ ಅಧಿಕಾರಿಗಳು, ಮಹಿಳಾ ನ್ಯಾಯಾಧೀಶರು, ಚುನಾವಣಾ ಆಯೋಗ ಮತ್ತು ಎದುರಾಳಿ ಪಕ್ಷಗಳ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದರು. ದೇಶದ್ರೋಹದ ಪ್ರಕರಣದಲ್ಲಿ ಇಮ್ರಾನ್‌ ಖಾನ್‌ ಅವರ ಆಪ್ತ ಶಹಬ್ಬಾಸ್‌ ಗಿಲ್‌ ಅವರನ್ನು ಕಳೆದ ವಾರ ಬಂಧಿಸಲಾಗಿದೆ. ಈ ಕಾರಣಕ್ಕಾಗಿ ಇಮ್ರಾನ್‌ ಖಾನ್‌ ಅವರು ಸರ್ಕಾರಿ ಸಂಸ್ಥೆಗಳ ವಿರುದ್ಧ ಮಾತನಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT