ಮಂಗಳವಾರ, ಮೇ 18, 2021
28 °C

ಪಾಕಿಸ್ತಾನ: ಶೌಖತ್ ತರೀನ್ ನೂತನ ಹಣಕಾಸು ಸಚಿವ

ಪಿಟಿಐ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಶುಕ್ರವಾರ ಸಂಪುಟ ಪುನರ‍್ರಚನೆ ಮಾಡಿದ್ದು, ನೂತನ ಹಣಕಾಸು ಸಚಿವರಾಗಿ ಶೌಕತ್‌ ತರೀನ್‌ ಅವರನ್ನು ನೇಮಕ ಮಾಡಿದ್ದಾರೆ.

ವೃತ್ತಿಯಿಂದ ಬ್ಯಾಂಕರ್ ಆಗಿರುವ 68 ವರ್ಷದ ತನೀರ್ ಅವರು, ಪಾಕಿಸ್ತಾನ್‌ ಪೀಪಲ್ಸ್‌ ಪಾರ್ಟಿ ನೇತೃತ್ವದ ಸರ್ಕಾರದಲ್ಲಿ (2009–10) ಅಲ್ಪಾವಧಿಯೇ ಈ ಸ್ಥಾನ ನಿಭಾಯಿಸಿದ್ದರು. ತಮ್ಮ ಸಿಲ್ಕ್‌ ಬ್ಯಾಂಕ್‌ಗಾಗಿ ಬಂಡವಾಳ ಸಂಗ್ರಹಿಸುವ ಗುರಿಯೊಂದಿಗೆ ಪದತ್ಯಾಗ ಮಾಡಿದ್ದರು. ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ತರೀನ್‌ ಅವರು ಆರಂಭದಲ್ಲಿ ಹೊಸ ಹೊಣೆ ಒಪ್ಪಲು ನಿರಾಕರಿಸಿದ್ದರು.

ಇವರ ಮೇಲಿದ್ದ ಭ್ರಷ್ಟಾಚಾರ ಆರೋಪಗಳನ್ನು ತನಿಖಾ ಸಂಸ್ಥೆ ನ್ಯಾಷನಲ್‌ ಅಕೌಂಟಬಿಲಿಟಿ ಬ್ಯೂರೊ (ಎನ್‌ಎಬಿ) ಕೈಬಿಡಿಟ್ಟಿದೆಯೇ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಹಲವು ಸಕ್ಕರೆ ಕಾರ್ಖಾನೆಗಳ ಮಾಲೀಕರಾದ ಇವರ ಸಂಬಂಧಿ ಜೆಹಾಂಗೀರ್‌ ತರೀನ್‌ ಕೂಡಾ ಪ್ರಭಾವಿ ರಾಜಕಾರಣಿಯಾಗಿದ್ದು, ಸದ್ಯ ಸಕ್ಕರೆ ಹಗರಣದ ತನಿಖೆ ಎದುರಿಸುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು