ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನದಲ್ಲಿ ಇಂದಿನಿಂದ ಶಾಲೆಗಳು ಪುನರಾರಂಭ

Last Updated 23 ಸೆಪ್ಟೆಂಬರ್ 2020, 10:06 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಶಾಲಾ ಕಾಲೇಜುಗಳನ್ನು ಹಂತ ಹಂತವಾಗಿ ತೆರೆಯಲು ತೀರ್ಮಾನಿಸಲಾಗಿದ್ದು, ಅದರ ಮೊದಲ ಹಂತವಾಗಿ ಬುಧವಾರದಿಂದ 6 ರಿಂದ 8ನೇ ತರಗತಿಗಳುಪುನರಾರಂಭಿಸಲಾಗಿದೆ.

ಕೋವಿಡ್ 19 ಮಾರ್ಗಸೂಚಿಯಲ್ಲಿರುವಂತೆ ಸೂಕ್ತ ಸುರಕ್ಷತಾ ಕ್ರಮಗಳೊಂದಿಗೆ ಖಾಸಗಿ ಮತ್ತು ಸರ್ಕಾರಿ ಎರಡೂ ಶಾಲೆಗಳೂ ಪುನರಾರಂಭಗೊಂಡಿವೆ.

‘ಶಾಲೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಇತರೆ ಸಿಬ್ಬಂದಿ ಕಡ್ಡಾಯವಾಗಿ ವ್ಯಕ್ತಿಗತ ಅಂತರವನ್ನು ಪಾಲಿಸಬೇಕು, ಮುಖಗವಸು ಧರಿಸಬೇಕು ಮತ್ತು ಆಗಾಗ ಕೈಗಳನ್ನು ಸ್ಯಾನಿಟೈಸರ್‌ನಿಂದ ಶುಚಿಗೊಳಿಸಬೇಕು‘ ಎಂದು ಸರ್ಕಾರ ಹೇಳಿರುವುದಾಗಿ ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ.

ಈ ತಿಂಗಳಾಂತ್ಯದಲ್ಲಿ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ತೆರೆಯುವುದಾಗಿ ನ್ಯಾಷನಲ್ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ ಮಂಗಳವಾರ ತಿಳಿಸಿತ್ತು. ಅದರಂತೆ ಸೆ. 15 ರಂದು ಪ್ರೌಢ ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ತೆರೆಯಲಾಗಿತ್ತು. ಇದೀಗ ಬುಧವಾರದಿಂದ 6ರಿಂದ 8ನೇ ತರಗತಿಗಳನ್ನು ತೆರೆಯಲಾಗಿದೆ.

ಆದರೆ ಸುರಕ್ಷತಾ ಸಿದ್ಧತೆಯಲ್ಲಿರುವ ಕೊರತೆಯಿಂದಾಗಿ ಸಿಂಧ್‌‌ ಪ್ರಾಂತ್ಯದಲ್ಲಿ ಮಾತ್ರ 6 ರಿಂದ 8 ನೇ ತರಗತಿಗಳನ್ನು ಸೆ.28 ರಂದು ತೆರೆಯಲು ಸರ್ಕಾರ ನಿರ್ಧರಿಸಿದೆ. ಇನ್ನು ಪ್ರಾಥಮಿಕ ಶಾಲೆಗಳು ಸೆ.30 ರಿಂದ ಆರಂಭಗೊಳ್ಳಲಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT