ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರರ ದಾಳಿ; ಪಾಕ್‌ನ ಮೂವರು ಯೋಧರ ಸಾವು

Last Updated 31 ಆಗಸ್ಟ್ 2020, 8:13 IST
ಅಕ್ಷರ ಗಾತ್ರ

ಇಸ್ಲಾಮಾಬಾದ್:ಆಫ್ಗಾನಿಸ್ತಾನ ಗಡಿಯಲ್ಲಿ ಭಾನುವಾರ ಉಗ್ರರು ನಡೆಸಿದ ದಾಳಿಯಿಂದಾಗಿ ಪಾಕಿಸ್ತಾನದ ಮೂವರು ಯೋಧರು ಸತ್ತಿದ್ದು, ನಾಲ್ವರು ಗಾಯಗೊಂಡಿದ್ದಾರೆ.

ಖೈಬರ್ ಪಾಕ್ ತುಂಕ್ವಾ ಪ್ರಾಂತ್ಯದ ದಕ್ಷಿನ ವಜಿರಿಸ್ತಾನ್‌ನಲ್ಲಿ ಉಗ್ರಗಾಮಿಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದ ಯೋಧರ ತುಕಡಿ ಮೇಲೆ ದಾಳಿ ನಡೆಸಿದ್ದಾರೆ ಎಂದು ಪಾಕ್ ಸೇನೆಯ ಹೇಳಿಕೆಯು ತಿಳಿಸಿದೆ.

ದಾಳಿಯ ಹೊಣೆಯನ್ನು ಯಾವುದೇ ಉಗ್ರರ ತಂಡ ಹೊತ್ತುಕೊಂಡಿಲ್ಲ. ಆದರೆ, ಈ ಕೃತ್ಯದ ಹಿಂದೆ ಈ ಭಾಗದಲ್ಲಿ ಹಿಂಸಾಕೃತ್ಯದಲ್ಲಿ ತೊಡಗಿರುವ ಪಾಕಿಸ್ತಾನಿ ತಾಲಿಬಾನಿ ತಂಡದ ಪಾತ್ರ ಇರಬಹುದು ಎಂದು ಆರೋಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT