ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನಿಸ್ತಾನದಿಂದ ಸ್ಥಳಾಂತರಗೊಂಡ ವಿದೇಶಿಗರಿಗೆ ಸ್ಥಳ ನೀಡಲು ಪಾಕ್‌ ಸಿದ್ಧತೆ

Last Updated 27 ಆಗಸ್ಟ್ 2021, 7:59 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಅಫ್ಗಾನಿಸ್ತಾನದಿಂದ ಸ್ಥಳಾಂತರಗೊಂಡ ವಿದೇಶಿಗರಿಗೆ ಸ್ಥಳಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಇಸ್ಲಾಮಾಬಾದ್‌ನ ಹೋಟೆಲ್‌ಗಳಲ್ಲಿ ಕೊಠಡಿಗಳನ್ನು ಇತರರಿಗೆ ಮುಂಚಿತವಾಗಿ ಕಾಯ್ದಿರಿಸದಂತೆ ಪಾಕಿಸ್ತಾನಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಅಫ್ಗಾನಿಸ್ತಾನದಿಂದ ಇಸ್ಲಾಮಾಬಾದ್‌ ಮೂಲಕ ಸಾಗುವ ವಿಮಾನಗಳಲ್ಲಿ ಆಗಮಿಸುವ ವಿದೇಶಿ ಅತಿಥಿಗಳಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ 21 ದಿನಗಳ ಕಾಲ ಇತರರಿಗೆ ಯಾವುದೇ ಕೊಠಡಿಗಳನ್ನು ಕಾಯ್ದಿರಿಸದಂತೆ ಹೋಟೆಲ್‌ಗಳ ಆಡಳಿತಕ್ಕೆ ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ಈ ಪ್ರಕ್ರಿಯೆ ವೇಳೆ, ಈಗಾಗಲೇ ಹೋಟೆಲ್‌ನಲ್ಲಿ ಉಳಿದಿರುವ ಅತಿಥಿಗಳಿಗೆ ತೊಂದರೆ ಉಂಟಾಗಬಾರದು ಎಂದು ಅವರು ಸೂಚಿಸಿದ್ದಾರೆ.

ಅಫ್ಗಾನಿಸ್ತಾನದ ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ಗುರುವಾರ ಆತ್ಮಾಹುತಿ ದಾಳಿ ನಡೆದಿದೆ ಇದರ ಬೆನ್ನಲೇ ಪಾಕಿಸ್ತಾನವು ಈ ಕ್ರಮಕೈಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT