ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ ಜೈಲುಗಳಲ್ಲಿ 682 ಭಾರತೀಯ ಕೈದಿಗಳು

Last Updated 1 ಜುಲೈ 2022, 13:28 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ದೇಶದ ವಿವಿಧ ಜೈಲುಗಳಲ್ಲಿ ಭಾರತದ ಒಟ್ಟು 682 ಕೈದಿಗಳಿದ್ದಾರೆ ಎಂದು ಪಾಕಿಸ್ತಾನವು ದೃಢಪಡಿಸಿದೆ.

2008ರ‌ ರಾಜತಾಂತ್ರಿಕ ಒಪ್ಪಂದದ ಅಡಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಮ್ಮ ವಶದಲ್ಲಿರುವ ಕೈದಿಗಳ ಪಟ್ಟಿಯನ್ನು ವಿನಿಮಯ ಮಾಡಿಕೊಂಡ ವೇಳೆ ಈ ಮಾಹಿತಿ ಹೊರಬಿದ್ದಿದೆ.

ಉಭಯ ದೇಶಗಳ ನಡುವೆ ಕೈದಿಗಳ ಪಟ್ಟಿಯನ್ನು ವರ್ಷಕ್ಕೆ ಎರಡು ಬಾರಿ, ಅಂದರೆಕ್ರಮವಾಗಿ ಜನವರಿ 1 ಹಾಗೂ ಜುಲೈ 1ರಂದು ವಿನಿಮಯ ಮಾಡಿಕೊಳ್ಳಲಾಗುತ್ತದೆ.

ಇಸ್ಲಾಮಾಬಾದ್‌ನಲ್ಲಿರುವ ಭಾರತದ ಹೈಕಮಿಷನರ್‌ ಕಚೇರಿಗೆ ಪಾಕಿಸ್ತಾನದ ವಿದೇಶಾಂಗ ಕಚೇರಿಯು ಕೈದಿಗಳ ಪಟ್ಟಿಯನ್ನು ನೀಡಿದೆ.

ಇದೇ ವೇಳೆ ಭಾರತ ಸಹ ಪಾಕಿಸ್ತಾನದ ಹೈಕಮಿಷನರ್‌ಗೆ ಪಾಕ್‌ ಕೈದಿಗಳ ಪಟ್ಟಿ ನೀಡಿದ್ದು, 461 ಕೈದಿಗಳು ಭಾರತದಲ್ಲಿ ಇದ್ದಾರೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT