ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಸಂಕಷ್ಟ: ಸರ್ಕಾರಿ ಉದ್ಯೋಗಿಗಳ ಶೇ 10ರಷ್ಟು ವೇತನ ಕಡಿತಕ್ಕೆ ಮುಂದಾದ ಪಾಕ್

 ರಾಷ್ಟ್ರೀಯ ಮಿತವ್ಯಯ ಸಮಿತಿಯ ಶಿಫಾರಸು
Last Updated 25 ಜನವರಿ 2023, 11:21 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನದಲ್ಲಿ, ಖರ್ಚು ಕಡಿಮೆ ಮಾಡಲು ಸರ್ಕಾರ ವಿವಿಧ ಕ್ರಮಗಳನ್ನು ಕೈಗೊಂಡಿದ್ದು, ಇದೀಗ ಸರ್ಕಾರಿ ನೌಕರರ ವೇತನವನ್ನು ಶೇ 10 ರಷ್ಟು ಕಡಿತಗೊಳಿಸಲು ಮುಂದಾಗಿದೆ.

ಪ್ರಧಾನಿ ಶಹಬಾಜ್ ಷರೀಫ್‌ ರಚನೆ ಮಾಡಿದ ರಾಷ್ಟ್ರೀಯ ಮಿತವ್ಯಯ ಸಮಿತಿ ಈ ನಿರ್ಧಾರ ಮಾಡಿದೆ. ಇದರ ಜತೆಗೆ ಸಚಿವಾಲಯಗಳ ಖರ್ಚನ್ನು ಶೇ 15 ರಷ್ಟು ಕಡಿಮೆ ಮಾಡಬೇಕು ಎಂದೂ ಶಿಫಾರಸು ಮಾಡಿದೆ.

ಜತೆಗೆ ಸಚಿವರು, ರಾಜ್ಯ ಖಾತೆ ಸಚಿವರು ಹಾಗೂ ಸಲಹೆಗಾರರ ಸಂಖ್ಯೆಯನ್ನು 78 ರಿಂದ 30ಕ್ಕೆ ಇಳಿಸಿ ಎಂದೂ ಸಮಿತಿ ಹೇಳಿದೆ.

ಈ ವರದಿ ಪ್ರಧಾನಿ ಶಹಬಾಜ್‌ ಅವರಿಗೆ ಕಳುಹಿಸಲಾಗುತ್ತದೆ. ಅಂತಿಮ ನಿರ್ಧಾರ ಅವರು ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT