ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಷಿಂಗ್ಟನ್ ವಿಮಾನ ನಿಲ್ದಾಣದಲ್ಲಿ ಲೇವಡಿಗೊಳಗಾದ ಪಾಕ್ ಸಚಿವ ಇಶಾಕ್ ದರ್‌

Last Updated 14 ಅಕ್ಟೋಬರ್ 2022, 11:30 IST
ಅಕ್ಷರ ಗಾತ್ರ

ವಾಷಿಂಗ್ಟನ್/ ಇಸ್ಲಾಮಾಬಾದ್: ವಾಷಿಂಗ್ಟನ್‌ನ ಸಭೆಯೊಂದರಲ್ಲಿ ಭಾಗವಹಿಸಲು ಇಲ್ಲಿನ ದಲ್ಲಾಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ದೆ ಬಂದಿದ್ದ ಪಾಕಿಸ್ತಾನದ ಹಣಕಾಸು ಸಚಿವ ಇಶಾಕ್ ದರ್ ಅವರನ್ನು ಕೆಲ ಅಪರಿಚಿತ ವ್ಯಕ್ತಿಗಳು ಲೇವಡಿ ಮಾಡಿದ್ದರಿಂದ ಅವರು ಮುಜುಗರಕ್ಕೆ ಒಳಗಾಗಬೇಕಾಯಿತು.

ವಿಶ್ವಬ್ಯಾಂಕ್ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿಯ ವಾರ್ಷಿಕ ಸಭೆಗಳಲ್ಲಿಭಾಗವಹಿಸಲು ಇಶಾಕ್ ಅವರು ವಾಷಿಂಗ್ಟನ್‌ಗೆ ಬಂದ ವೇಳೆ ಈ ಘಟನೆ ನಡೆದಿದೆ.

ಈ ಸಂಬಂಧ ಟ್ವಿಟ್ಟರ್‌ನಲ್ಲಿ ಗುರುವಾರ ವಿಡಿಯೊವೊಂದು ವೈರಲ್ ಆಗಿದೆ. ಇಶಾಕ್ ಅವರು ಅಮೆರಿಕದಲ್ಲಿರುವ ಪಾಕಿಸ್ತಾನದ ರಾಯಭಾರಿ ಮಸೂದ್ ಖಾನ್ ಮತ್ತು ಇತರ ಅಧಿಕಾರಿಗಳೊಂದಿಗೆ ವಿಮಾನನಿಲ್ದಾಣದಲ್ಲಿ ಇರುವ ವೇಳೆ ಅಪರಿಚಿತರು ದಾರ್ ಅವರನ್ನು ಗೇಲಿ ಮಾಡಿದರು. ದಾರ್ ಕಡೆಗೆ ಕೈತೋರಿಸಿ ‘ಕಳ್ಳ ಕಳ್ಳ, ಸುಳ್ಳುಗಾರ’ ಎನ್ನುವ ಘೋಷಣೆಗಳನ್ನೂ ಕೂಗಿದರು. ಈ ವೇಳೆ ತಾಳ್ಮೆ ಕಳೆದುಕೊಂಡ ಇಶಾಕ್ ಅವರು ಕೂಡಾ ಪ್ರತಿಯಾಗಿ ‘ನೀನು ಕಳ್ಳ,ಸುಳ್ಳುಗಾರ’ ಎಂದು ಹೇಳಿದ್ದಾರೆ.

ಪಾಕಿಸ್ತಾನದ ಸಚಿವರು ಈ ಹಿಂದೆಯೂ ವಿದೇಶ ಪ್ರವಾಸ ಹಾಗೂ ಪಾಕಿಸ್ತಾನದ ಸಾರ್ವಜನಿಕ ಸ್ಥಳಗಳಲ್ಲಿ ಲೇವಡಿಗೊಳಗಾಗಿದ್ದಾರೆ. ಕಳೆದ ತಿಂಗಳಷ್ಟೇ ಪಾಕಿಸ್ತಾನದ ಮಾಹಿತಿ ಸಚಿವೆ ಮರಿ‌ಯುಂ ಔರಂಗಜೇಬ್ ಅವರನ್ನು ಲಂಡನ್‌ನ ಕಾಫಿ ಶಾಪ್‌ವೊಂದರಲ್ಲಿ ಲೇವಡಿ ಮಾಡಲಾಗಿತ್ತು. ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷದ ಬೆಂಬಲಿಗರು ರೆಸ್ಟೊರೆಂಟ್‌ವೊಂದರಲ್ಲಿ ಸಚಿವ ಅಹ್ಸಾನ್ ಇಕ್ಬಾಲ್ ಅವರಿಗೆ ಕಿರುಕುಳ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT