ಭಾನುವಾರ, ಸೆಪ್ಟೆಂಬರ್ 26, 2021
28 °C

ಭಾರತ ಸೇರಿ 11 ರಾಷ್ಟ್ರಗಳ ಮೇಲಿನ ವಿಮಾನ ಪ್ರಯಾಣ ನಿರ್ಬಂಧ ಸಡಿಲಿಸಿದ ಪಾಕ್

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್:‌ ಭಾರತ ಸೇರಿದಂತೆ ಹನ್ನೊಂದು ರಾಷ್ಟ್ರಗಳ ವಿಮಾನ ಪ್ರಯಾಣಕ್ಕೆ ವಿಧಿಸಿದ್ದ ನಿರ್ಬಂಧವನ್ನು ಪಾಕಿಸ್ತಾನ ಸಡಿಲಗೊಳಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ನಾಗರಿಕ ವಿಮಾನಯಾನ ಪ್ರಾಧಿಕಾರವು (ಸಿಎಎ) ಅಂತರರಾಷ್ಟ್ರೀಯ ಪ್ರಯಾಣ ಪಟ್ಟಿಯನ್ನು ಪರಿಶೀಲಿಸಿದ್ದು, ಭಾರತ, ಅರ್ಜೆಂಟೀನಾ, ಭೂತಾನ್‌, ಮಾಲ್ಡೀವ್ಸ್‌ ಮತ್ತು ಬ್ರೆಜಿಲ್‌ ಸೇರಿ ಒಟ್ಟು ಹನ್ನೊಂದು ರಾಷ್ಟ್ರಗಳ ಪ್ರಯಾಣಿಕರಿಗೆ ನಿರ್ಬಂಧ ಸಡಿಲಿಸಿದೆ ಎಂದು ಎಆರ್‌ವೈ ನ್ಯೂಸ್‌ ಶುಕ್ರವಾರ ವರದಿ ಮಾಡಿದೆ.

ಈ ರಾಷ್ಟ್ರಗಳಲ್ಲಿರುವ ಪಾಕಿಸ್ತಾನಿ ನಾಗರಿಕರು ವಾಪಸ್‌ ಆಗಲು ಅನುಮತಿ ಇದೆಯಾದರೂ, ಕೋವಿಡ್‌ ಪರೀಕ್ಷೆಯ ನೆಗೆಟಿವ್‌ ವರದಿ ಕಡ್ಡಾಯವಾಗಿದೆ.

ಕೋವಿಡ್‌ ಹರಡುವಿಕೆಯನ್ನು ನಿಯಂತ್ರಿಸುವ ಸಲುವಾಗಿ ವಿಮಾನಯಾನ ಪ್ರಾಧಿಕಾರವು ಲಸಿಕೆ ಪಡೆಯದವರಿಗೆ ದೇಶೀಯ ವಿಮಾನ ಪ್ರಯಾಣವನ್ನೂ ನಿರ್ಬಂಧಿಸಿದೆ.

ಪಾಕಿಸ್ತಾನದ ನ್ಯಾಷನಲ್ ಕಮಾಂಡ್ ಮತ್ತು ಆಪರೇಷನ್ ಸೆಂಟರ್, ಭಾರತ ಸೇರಿದಂತೆ ಒಟ್ಟು 26 ದೇಶಗಳಿಂದ ಬರುವ ಪ್ರಯಾಣಿಕರಿಗೆ ಜೂನ್‌ನಲ್ಲಿ ಪ್ರಯಾಣ ನಿರ್ಬಂಧಗಳನ್ನು ವಿಧಿಸಿತ್ತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು