ಶುಕ್ರವಾರ, ಏಪ್ರಿಲ್ 23, 2021
28 °C

ಪಾಕಿಸ್ತಾನ: ಸೋತ ಹಣಕಾಸು ಸಚಿವ, ವಿಶ್ವಾಸ ಮತಯಾಚಿಸಲಿರುವ ಪ್ರಧಾನಿ ಇಮ್ರಾನ್ ಖಾನ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಇಸ್ಲಾಮಾಬಾದ್‌: ಚುನಾವಣೆಯಲ್ಲಿ ಹಣಕಾಸು ಸಚಿವ ಸೋಲು ಕಂಡಿರುವ ಬೆನ್ನಲ್ಲೇ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಸಂಸತ್ತಿನಲ್ಲಿ ವಿಶ್ವಾಸ ಮತಯಾಚಿಸಲು ನಿರ್ಧರಿಸಿದ್ದಾರೆ.

ಸಂಸತ್ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಯುಸೂಫ್‌ ರಾಜಾ ಗಿಲಾನಿ ಎದುರು ಇಮ್ರಾನ್‌ ಖಾನ್‌ ಅವರ ಆಪ್ತ ಮತ್ತು ಹಣಕಾಸು ಸಚಿವ ಅಬ್ದುಲ್‌ ಹಫೀಜ್‌ ಶೇಖ್ ಬುಧವಾರ ಸೋಲು ಅನುಭವಿಸಿದರು. ಪಾಕಿಸ್ತಾನ್ ತೆಹ್ರೀಕ್‌–ಇ–ಇನ್ಸಾಫ್‌ (ಪಿಟಿಐ) ಅಧ್ಯಕ್ಷರೂ ಆಗಿರುವ ಇಮ್ರಾನ್‌ ಖಾನ್‌ ಸ್ವತಃ ಚುನಾವಣೆಯಲ್ಲಿ ಪ್ರಚಾರ ಕೈಗೊಂಡಿದ್ದರು.

ಪಾಕಿಸ್ತಾನ್ ಪೀಪಲ್ಸ್‌ ಪಾರ್ಟಿಯ (ಪಿಪಿಪಿ) ಹಿರಿಯ ಮುಖಂಡ ಗಿಲಾನಿ, ವಿರೋಧ ಪಕ್ಷಗಳ ಮೈತ್ರಿಯಾಗಿರುವ ಪಾಕಿಸ್ತಾನ್‌ ಡೆಮಾಕ್ರಟಿಕ್‌ ಮೂವ್ಮೆಂಟ್‌ನ (ಪಿಡಿಎಂ) ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.

ಗಿಲಾನಿ ಗೆಲುವು ಕಾಣುತ್ತಿದ್ದಂತೆ ಇಮ್ರಾನ್‌ ಖಾನ್‌ಗೆ ವಿರೋಧ ಪಕ್ಷದ ಮುಖಂಡರಿಂದ ಟೀಕೆ ವ್ಯಕ್ತವಾಗಿದ್ದು, ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವಂತೆ ಒತ್ತಾಯಿಸಿದ್ದಾರೆ. ಫಲಿತಾಂಶ ಘೋಷಣೆಯಾಗಿ ಕೆಲವು ಗಂಟೆಗಳ ಬಳಿಕ ಮಾತನಾಡಿದ ವಿದೇಶಾಂಗ ಸಚಿವ ಶಾಹ್‌ ಮಹಮೂದ್‌ ಖುರೇಶಿ, ವಿಶ್ವಾಸ ಮತ ಯಾಚಿಸಲು ಪ್ರಧಾನಿ ನಿರ್ಧಾರಿಸಿದ್ದಾರೆ ಎಂದು ಪ್ರಕಟಿಸಿದರು. ಖರೇಶಿ ಆಡಳಿತಾರೂಢ ಪಕ್ಷದ ಉಪಾಧ್ಯಕ್ಷರೂ ಆಗಿದ್ದಾರೆ.

'ಇಮ್ರಾನ್‌ ಖಾನ್‌ ರಾಜೀನಾಮೆ ಸಲ್ಲಿಸಬೇಕು, ಇದು ಕೇವಲ ವಿರೋಧ ಪಕ್ಷಗಳ ಬೇಡಿಕೆ ಅಲ್ಲ, ಆಡಳಿತ ಪಕ್ಷದ ಸದಸ್ಯರೂ ಇದನ್ನೇ ಬಯಸಿದ್ದಾರೆ. ಪಾಕಿಸ್ತಾನದ ಪ್ರಜಾಪ್ರಭುತ್ವದ ಹಾದಿಯಲ್ಲಿ ಹೊಸ ಮನ್ವಂತರದ ಆರಂಭವಾಗಿದೆ' ಎಂದು ಪಿಪಿಪಿ ಮುಖ್ಯಸ್ಥ ಬಿಲಾವಲ್‌ ಭುಟ್ಟೊ–ಜರ್ದಾರಿ ಆಗ್ರಹಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು