ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯಾಣಿಕನ ಲ್ಯಾಪ್‌ಟಾಪ್‌ನಲ್ಲಿ ಬೆಂಕಿ: ವಿಮಾನ ತೆರವು

Last Updated 25 ಡಿಸೆಂಬರ್ 2022, 12:53 IST
ಅಕ್ಷರ ಗಾತ್ರ

ನ್ಯೂಯಾರ್ಕ್‌ (ಎಪಿ) : ಪ್ರಯಾಣಿಕರೊಬ್ಬರ ಲ್ಯಾಪ್‌ಟಾಪ್‌ನಲ್ಲಿ ಸಣ್ಣ ಬೆಂಕಿ ಕಾಣಿಸಿಕೊಂಡ ಕಾರಣ ಇಲ್ಲಿಯ ಜೆಎಫ್‌ಕೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ನಿರ್ವಹಣಾ ದಳ ಜೆಟ್‌ ಬ್ಲ್ಯೂ ವಿಮಾನವನ್ನು ಶನಿವಾರ ಅಲ್ಲಿಂದ ತೆರವುಗೊಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿ ಜೆಟ್‌ಬ್ಲೂ ಫ್ಲೈಟ್ 662 ರ ಸಿಬ್ಬಂದಿ ಬೆಂಕಿಯನ್ನು ತಕ್ಷಣ ನಂದಿಸಿದ್ದಾರೆ. ಆದರೂ ಏಳು ಮಂದಿ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಉಳಿದಂತೆ 67 ಜನರನ್ನು ತುರ್ತು ನಿರ್ಗಮನಾ ಸ್ಲೈಡ್‌ ಮೂಲಕ ಹಾಗೂ 60 ಜನರನ್ನು ಸಾಮಾನ್ಯ ಬಾಗಿಲಿನಿಂದ ಸುರಕ್ಷಿತವಾಗಿ ಹೊರಕರೆತರಲಾಗಿದೆ ಎಂದು ಹೇಳಲಾಗಿದೆ.

ವಿಮಾನ ಟರ್ಮಿನಲ್‌ 5ರ ಗೇಟಿನಲ್ಲಿ ಇರುವಾಗ ಪ್ರಯಾಣಿಕರೊಬ್ಬರ ಲ್ಯಾಪ್‌ಟಾಪ್‌ನ ಲೀಥೀಯಂ ಬ್ಯಾಟರಿಯಲ್ಲಿ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ ಎಂದು ಎಫ್‌ಎಎ ಅಧಿಕಾರಿಗಳು, ನ್ಯೂಯಾರ್ಕ್‌ ಮತ್ತು ನ್ಯೂಜೆರ್ಸಿಯ ಜೆಟ್‌ ಬ್ಲ್ಯೂನ ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ನ್ಯೂಯಾರ್ಕ್‌ ಡೈಲಿ ವರದಿ ಮಾಡಿದೆ.

‘ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿದೆ‘. ಅನಾಹುತದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಜೆಟ್‌ ಬ್ಲ್ಯೂ ಸಂಸ್ಥೆ ಹೇಳಿದೆ ಎಂಬುದಾಗಿ ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT