ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಲಸಿಕೆ ಕಡ್ಡಾಯ ಆದೇಶ ಕೈಬಿಟ್ಟ ಪೆಂಟಗನ್

Last Updated 11 ಜನವರಿ 2023, 13:18 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಕೋವಿಡ್‌ ಲಸಿಕೆ ಕಡ್ಡಾಯ ಆದೇಶವನ್ನು ಪೆಂಟಗನ್‌ ಮಂಗಳವಾರ ಅಧಿಕೃತವಾಗಿ ಕೈಬಿಟ್ಟಿದೆ. ಆದರೆ ಲಸಿಕೆ ಪಡೆಯದ ಯೋಧರನ್ನು ಕರ್ತವ್ಯಕ್ಕೆ ನಿಯೋಜಿಸಬೇಕೇ ಅಥವಾ ಹೇಗೆ ನಿಯೋಜಿಸಬೇಕು ಎಂಬ ನಿಟ್ಟಿನಲ್ಲಿ ಕಮಾಂಡರ್‌ಗಳ ವಿವೇಚನೆಗೆ ಬಿಡುವಂತಹ ಸುತ್ತೋಲೆಯನ್ನು ರಕ್ಷಣಾ ಕಾರ್ಯದರ್ಶಿ ಲಾಯ್ಡ್‌ ಆಸ್ಟಿನ್‌ ಹೊರಡಿಸಿದ್ದಾರೆ.

ಲಸಿಕೆ ಪಡೆಯದವರನ್ನು ಸೇವೆಯಿಂದ ವಜಾಗೊಳಿಸಲಾಗುವುದು ಎಂಬ ಆದೇಶವನ್ನು ಈಗಾಗಲೇ ರದ್ದುಪಡಿಸಲಾಗಿದೆ. ಎಲ್ಲರೂ ತಪ್ಪದೆ ಲಸಿಕೆ ಪಡೆಯಬೇಕು ಎಂಬ ನಿಟ್ಟಿನಲ್ಲಿ ಉತ್ತೇಜನ ನೀಡುವ ಕೆಲಸವನ್ನು ರಕ್ಷಣಾ ಇಲಾಖೆ ಮುಂದುವರಿಸಲಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಈ ಹಿಂದೆ ಲಸಿಕೆ ಹಾಕಿಸಿಕೊಳ್ಳದ 8,400ಕ್ಕೂ ಅಧಿಕ ಯೋಧರನ್ನು ಸೇನಾ ಪಡೆಗಳಿಂದ ಹೊರಹಾಕಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT