ಲಾಕ್‌ಡೌನ್ ವಿರೋಧಿ ಪ್ರತಿಭಟನೆ ಹತ್ತಿಕ್ಕಲು ಚೀನಾದಲ್ಲಿ ಪೆಪ್ಪರ್ ಸ್ಪ್ರೇ ಬಳಕೆ

ಬೀಜಿಂಗ್: ಚೀನಾದಲ್ಲಿ ನಡೆಯುತ್ತಿರುವ ಕೋವಿಡ್ ಲಾಕ್‌ಡೌನ್ ವಿರೋಧಿ ಪ್ರತಿಭಟನೆಗಳು ಭಾನುವಾರ ರಾಜಕೀಯ ಸ್ವರೂಪ ಪಡೆದವು. ಶಾಂಘೈನ ವುಲುಮುಖಿ ರಸ್ತೆಯಲ್ಲಿ ಶನಿವಾರ ರಾತ್ರಿಯಿಂದಲೇ ಭಾರಿ ಭದ್ರತೆ ಇದ್ದರೂ ಭಾನುವಾರ ಬೆಳಿಗ್ಗೆ ಸಾವಿರಾರು ಜನರು ಪ್ರತಿಭಟನೆಗೆ ಇಳಿದರು. ಉರುಮ್ಕಿ ರಸ್ತೆಯಲ್ಲಿ ಮಧ್ಯರಾತ್ರಿ ಸೇರಿದ್ದ ಸುಮಾರು 300 ಪ್ರತಿಭಟನಕಾರರ ಮೇಲೆ ಪೊಲೀಸರು ಪೆಪ್ಪರ್ ಸ್ಪ್ರೇ ಬಳಸಿದರು.
‘ಷಿ ಜಿನ್‌ಪಿಂಗ್ ಕೆಳಗಿಳಿಯಲಿ, ಸಿಪಿಸಿ ಅಧಿಕಾರದಿಂದ ತೊಲಗಲಿ’, ‘ನಮಗೆ ಪಿಸಿಆರ್ ಪರೀಕ್ಷೆ ಬೇಡ, ನಮಗೆ ಸ್ವಾತಂತ್ರ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯ ಬೇಕು’ ಎಂಬ ಘೋಷಣೆಗಳು ಮೊಳಗಿದವು.
ಸತತ ಮೂರನೇ ಬಾರಿಗೆ ಅಧ್ಯಕ್ಷರಾಗಿರುವ ಷಿ ಜಿನ್‌ಪಿಂಗ್ ಅವರಿಗೆ ದೇಶದಲ್ಲಿ ಉಲ್ಬಣಿಸುತ್ತಿರುವ ಕೋವಿಡ್, ಲಾಕ್‌ಡೌನ್ ವಿರೋಧಿ ಪ್ರತಿಭಟನೆ ಹಾಗೂ ಆರ್ಥಿಕ ಹಿಂಜರಿತ ನಿಭಾಯಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.