ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತ ಅಧಿಕಾರಿಗಳ ಸಮ್ಮುಖದಲ್ಲಿ ಮುಷರಫ್ ಅಂತ್ಯಕ್ರಿಯೆ

Last Updated 7 ಫೆಬ್ರುವರಿ 2023, 15:44 IST
ಅಕ್ಷರ ಗಾತ್ರ

ಕರಾಚಿ: ಭಾನುವಾರ ನಿಧನರಾದ ಪಾಕಿಸ್ತಾನದ ಮಾಜಿ ಮಿಲಿಟರಿ ಆಡಳಿತಾಧಿಕಾರಿ ಹಾಗೂ ಮಾಜಿ ಅಧ್ಯಕ್ಷ ಜನರಲ್‌ ಪರ್ವೇಜ್‌ ಮುಷರಫ್ ಅವರ ಅಂತ್ಯಕ್ರಿಯೆಯು ಸೇನಾ ಸ್ಮಶಾನದಲ್ಲಿ ಸಕಲ ಗೌರವದೊಂದಿಗೆ ನೆರವೇರಿತು. ಕುಟುಂಬಸ್ಥರು ಹಾಗೂ ಮಾಜಿ, ಹಾಲಿ ಅಧಿಕಾರಿಗಳು ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ ಕರಾಚಿಯ ಗುಲ್ ಮೊಹರ್ ಪೊಲೊ ಮೈದಾನದಲ್ಲಿ ನಡೆದ ನಮಾಜ್‌–ಎ–ಜನಜಾದಲ್ಲಿ (ಅಂತ್ಯಕ್ರಿಯೆಯ ಪ್ರಾರ್ಥನೆ) ಅಧ್ಯಕ್ಷ ಆರಿಫ್ ಅಲ್ವಿ ಅಥವಾ ಪ್ರಧಾನಿ ಶೆಹಬಾಜ್‌ ಷರೀಫ್‌ ಭಾಗವಹಿಸಿರಲಿಲ್ಲ. ಐಎಸ್‌ಐ ಮಾಜಿ ಮುಖ್ಯಸ್ಥರು ಹಾಗೂ ಇತರ ನಿವೃತ್ತ ಸೇನಾ ಅಧಿಕಾರಿಗಳು ಹಾಗೂ ಕೆಲ ರಾಜಕಾರಣಿಗಳು ಪ್ರಾರ್ಥನೆಯಲ್ಲಿ ಹಾಜರಿದ್ದರು.

ದೀರ್ಘ ಕಾಲದ ಅನಾರೋಗ್ಯದಿಂದಾಗಿ ಬಳಲುತ್ತಿದ್ದ ಅವರಿಗೆ ದುಬೈನ ಅಮೆರಿಕನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದರು.

‘ಅಮೈಲೊಯ್ಡೊಸಿಸ್‌’ ಎಂಬ ಅಪರೂಪದ ಕಾಯಿಲೆಗೆ ಅವರು ತುತ್ತಾಗಿದ್ದರು. ದೇಶದ ಅಂಗಾಂಗಗಳು ಹಾಗೂ ಅಂಗಾಂಶಗಳಲ್ಲಿ ‘ಅಮೈಲೊಯ್ಡ್’ ಎಂಬ ಪ್ರೊಟೀನ್ ಅಸಹಜ ಪ್ರಮಾಣದಲ್ಲಿ ಶೇಖರಣೆಯಾಗುವುದರಿಂದ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ ಎಂದು ಅವರ ಕುಟುಂಬ ಮೂಲಗಳು ಹೇಳಿವೆ.

ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆಗಾಗಿ 2016ರ ಮಾರ್ಚ್‌ನಲ್ಲಿ ದುಬೈಗೆ ತೆರಳಿದ್ದರು. ಮುಷರ‍್ರಫ್‌ ಅವರು ಈ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದುದನ್ನು ಅವರ ಪಕ್ಷವಾದ ಆಲ್‌ ಪಾಕಿಸ್ತಾನ ಮುಸ್ಲಿಂ ಲೀಗ್‌ (ಎಪಿಎಂಎಲ್‌) 2018ರಲ್ಲಿ ಬಹಿರಂಗಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT