ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

18 ಪಾಕಿಸ್ತಾನಿ ರೂಪಾಯಿ ಪೆಟ್ರೋಲ್‌ ದರ ಇಳಿಸಿದ ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌

Last Updated 15 ಜುಲೈ 2022, 5:31 IST
ಅಕ್ಷರ ಗಾತ್ರ

ಇಸ್ಲಾಮಬಾದ್‌: ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ ಅವರು ಇಂಧನ ದರವನ್ನು ಕಡಿತಗೊಳಿಸಿದ್ದಾರೆ. ಪೆಟ್ರೋಲ್‌ ದರ 18.50 ಪಾಕಿಸ್ತಾನ ರೂಪಾಯಿ ಹಾಗೂ ಡೀಸೆಲ್‌ ದರ 40.54 ಪಾಕಿಸ್ತಾನ ರೂಪಾಯಿಯಷ್ಟು ಇಳಿಕೆ ಮಾಡಿದ್ದಾರೆ.

3 ತಿಂಗಳ ಹಿಂದೆ ಶೆಹಬಾಜ್‌ ಅವರು ಅಧಿಕಾರಕ್ಕೆ ಬಂದ ಬಳಿಕ 4 ಸುತ್ತಿನ ದೊಡ್ಡ ಮೊತ್ತದ ಬೆಲೆ ಏರಿಕೆಯಾಗಿತ್ತು. ಇದೀಗ ಪೆಟ್ರೋಲ್ ಮತ್ತು ಡೀಸೆಲ್‌ ದರ ಇಳಿಕೆಯಿಂದ ಅಲ್ಲಿನ ಜನರಿಗೆ ಕೊಂಚ ನಿರಾಳತೆ ಸಿಕ್ಕಂತಾಗಿದೆ.

ಕಚ್ಚಾ ತೈಲ ದರ ಒಂದು ಬ್ಯಾರೆಲ್‌ಗೆ 100 ಡಾಲರ್‌ಗಿಂತ ಕಡಿಮೆಯಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶೆಹಬಾಜ್‌ ಹೇಳಿದ್ದಾರೆ.

ಇಳಿಕೆಯೊಂದಿಗೆ ಪಾಕಿಸ್ತಾನದಲ್ಲಿ ಪ್ರಸ್ತುತ ಒಂದು ಲೀಟರ್‌ ಪೆಟ್ರೋಲ್‌ಗೆ 230.24 ಪಾಕಿಸ್ತಾನಿ ರೂಪಾಯಿ (ಇದು ಭಾರತದ ₹ 87.84ಕ್ಕೆ ಸಮ) ಇದೆ. ಡೀಸೆಲ್‌ ದರ 236 ಪಾಕಿಸ್ತಾನಿ ರೂಪಾಯಿ (ಇದು ಭಾರತದ ₹ 90.04ಕ್ಕೆ ಸಮ) ಇದೆ.

ಬೆಂಗಳೂರಿನಲ್ಲಿ ಪ್ರಸ್ತುತ ಪೆಟ್ರೋಲ್‌ ದರ ಲೀಟರ್‌ ಒಂದಕ್ಕೆ ₹ 101.94 ಇದೆ. ಡೀಸೆಲ್‌ ದರ ₹ 87.89 ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT