ಫೈಝರ್ ಲಸಿಕೆ: ತುರ್ತು ಬಳಕೆಗೆ ಅಮೆರಿಕದ ಎಫ್‌ಡಿಎ ಅನುಮತಿ

ವಾಷಿಂಗ್ಟನ್: ಕೋವಿಡ್–19 ವಿರುದ್ಧ ಪರಿಣಾಮಕಾರಿ ಲಸಿಕೆಯಾಗಿ ಗುರುತಿಸಿಕೊಂಡಿರುವ ಫೈಝರ್ ಲಸಿಕೆ ಬಳಕೆಗೆ ಅಮೆರಿಕದ ‘ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್’(ಎಫ್‌ಡಿಎ) ಅನುಮತಿ ನೀಡಿದೆ.
ಗುರುವಾರ ನಡೆದ ಎಫ್‌ಡಿಎ ವಿಭಾಗದ ತಜ್ಞರ ಲಸಿಕೆ ಸಲಹಾ ಮಂಡಳಿಯು ಲಸಿಕೆ ಪರಿಣಾಮದ ಬಗ್ಗೆ ಚರ್ಚೆ ನಡೆಸಿತು. ನಂತರ ತುರ್ತುಬಳಕೆಯ ಅಂತಿಮ ನಿರ್ಧಾರದ ಬಗ್ಗೆ ಮತಕ್ಕೆ ಹಾಕಲಾಯಿತು. 17 ಮತಗಳು ತುರ್ತುಬಳಕೆಯ ಪರವಾಗಿ ಹಾಗೂ 4 ಮತಗಳು ವಿರುದ್ಧವಾಗಿ ಚಲಾವಣೆಯಾದವು ಒಬ್ಬರು ಗೈರು ಆಗಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.
ಲಭ್ಯವಿರುವ ದತ್ತಾಂಶಗಳು, ವೈಜ್ಞಾನಿಕ ಪುರಾವೆಗಳ ಸಮಗ್ರತೆಯ ಆಧಾರದ ಮೇಲೆ, ಫೈಝರ್ ಲಸಿಕೆ 16 ವರ್ಷ ಮತ್ತು ಮೇಲ್ಪಟ್ಟ ವ್ಯಕ್ತಿಗಳಲ್ಲಿ ಅಪಾಯಕ್ಕಿಂತ ಹೆಚ್ಚು ಪ್ರಯೋಜನಗಳನ್ನು ಹೊಂದಿದೆ ಎಂಬುದು ಪ್ರಾಥಮಿಕ ಹಂತದಲ್ಲಿ ತಿಳಿದಿರುವುದರಿಂದ ತುರ್ತುಬಳಕೆಗೆ ಅನುಮೋದಿಸಲಾಗಿದೆ ಎಂದು ಸಮಿತಿ ತಿಳಿಸಿದೆ.
ಮಂಡಳಿಯು ಲಸಿಕೆ ಬಳಕೆಗೆ ಒಪ್ಪಿಗೆ ನೀಡಿರುವುದರಿಂದ ಲಕ್ಷಾಂತರ ಡೋಸ್‌ಗಳನ್ನು ಆಮದು ಮಾಡಿಕೊಳ್ಳಲು ಅಮೆರಿಕ ಸಜ್ಜಾಗಿದೆ.
ಬ್ರಿಟನ್, ಕೆನಾಡ, ಬಹ್ರೇನ್ ಮತ್ತು ಸೌದಿ ಅರೇಬಿಯಾ ದೇಶಗಳು ಈಗಾಗಲೇ ತುರ್ತು ಬಳಕೆಗೆ ಅನುಮೋದನೆ ನೀಡಿವೆ. ಫೈಝರ್ ಲಸಿಕೆಯ ತುರ್ತು ಬಳಕೆಯ ಬಗೆಗಿನ ಪ್ರಸ್ತಾವನೆ ಭಾರತ ಸರ್ಕಾರದ ಮುಂದಿದೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.