ಮಂಗಳವಾರ, ಏಪ್ರಿಲ್ 20, 2021
26 °C

ಫಿಲಿಪ್ಪಿನ್ಸ್‌ ಎನ್‌ಕೌಂಟರ್‌: 9 ಶಂಕಿತ ದಂಗೆಕೋರರು ಹತ

ಎಪಿ Updated:

ಅಕ್ಷರ ಗಾತ್ರ : | |

Prajavani

ಮನಿಲಾ: ‘ವಾರಾಂತ್ಯದಲ್ಲಿ ಫಿಲಿಪ್ಪಿನ್ಸ್‌ನ ಸೇನಾ ಪಡೆ ಮತ್ತು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಒಂಬತ್ತು ಮಂದಿ ಶಂಕಿತ ಕಮ್ಯುನಿಸ್ಟ್‌ ದಂಗೆಕೋರರನ್ನು ಕೊಂದು ಹಾಕಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಶಂಕಿತ ದಂಗೆಕೋರರು ತಮ್ಮ ಮೇಲೆ ಮೊದಲು ಗುಂಡಿನ ದಾಳಿ ನಡೆಸಿದರು. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆ ದಾಳಿ ನಡೆಸಿದೆ’ ಎಂದು‌ ಪೊಲೀಸರು ತಿಳಿಸಿದ್ದಾರೆ.

‘ಈ ದಾಳಿಗೆ ಹಲವರಿಂದ ಭಾರೀ ಖಂಡನೆ ವ್ಯಕ್ತವಾಗಿದ್ದು, ಭದ್ರತಾ ಪಡೆಯು ನಿರಾಯುಧ ಕಾರ್ಯಕರ್ತರ ಮೇಲೆ ಗುಂಡು ಹಾರಿಸಿದೆ’ ಎಂಬ ಆರೋಪ ಕೇಳಿಬಂದಿದೆ.

‘ಮೃತರು ಕಮ್ಯುನಿಸ್ಟ್‌ ಉಗ್ರ ಸಂಘಟನೆಗೆ ಸೇರಿದವರು. ನಾವು ಉಗ್ರರಿಗಾಗಿ ಶೋಧ ನಡೆಸುತ್ತಿರುವಾಗ ಅವರು ನಮ್ಮ ಮೇಲೆ ಮೊದಲು ದಾಳಿ ನಡೆಸಿದ್ದಾರೆ. ಇದಕ್ಕೆ ನಾವು ಪ್ರತ್ಯುತ್ತರ ನೀಡಿದ್ದೇವೆ. ಈ ಗುಂಡಿನ ಚಕಮಕಿಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಕರೆತರಲಾಯಿತು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದರು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ವಾರಾಂತ್ಯದಲ್ಲಿ ಕ್ಯಾವೈಟ್, ಲಗುನಾ, ಬಟಂಗಾಸ್ ಮತ್ತು ರಿಜಾಲ್ ಪ್ರಾಂತ್ಯದ ಹಲವೆಡೆ ಬಂದೂಕು ಮತ್ತು ಸ್ಪೋಟಕಗಳಿಗಾಗಿ ಶೋಧ ನಡೆಸಲಾಗಿದೆ. ಈ ವೇಳೆ ಆರು ಶಂಕಿತರನ್ನು ಬಂಧಿಸಲಾಗಿದ್ದು, 9 ಮಂದಿ ನಾಪತ್ತೆಯಾಗಿದ್ದರು’ ಎಂದು ಅವರು ಹೇಳಿದರು.

ಆದರೆ ಈ ದಾಳಿಯನ್ನು ಖಂಡಿಸಿರುವ ಎಡ ಮತ್ತು ಬಲ ಪಂಥೀಯ ಗುಂಪುಗಳು ಈ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ಆಗ್ರಹಿಸಿವೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು