ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ಗಾಗಿ ನೊಬೆಲ್ ಮಾರಲು ಮುಂದಾದ ರಷ್ಯಾ ಪತ್ರಕರ್ತ

ಜೂನ್ 20ರಂದು ನೊಬೆಲ್ ಶಾಂತಿ ಪಾರಿತೋಷಕ ಹರಾಜು
Last Updated 17 ಜೂನ್ 2022, 12:30 IST
ಅಕ್ಷರ ಗಾತ್ರ

ಮಾಸ್ಕೊ:ಉಕ್ರೇನ್‌ ನಿರಾಶ್ರಿತರಿಗೆ ನೆರವಾಗುವ ಉದ್ದೇಶದಿಂದ ರಷ್ಯಾದ ನೊಬೆಲ್‌ ಶಾಂತಿ ಪುರಸ್ಕೃತ, ಪತ್ರಕರ್ತ ಡಿಮಿರ್ಟಿ ಮುರಾಟೊವ್‌ ಅವರು ತಮ್ಮ ನೊಬೆಲ್ ಪಾರಿತೋಷಕವನ್ನೇ ಮಾರಲು ಮುಂದಾಗಿದ್ದಾರೆ.

ಮುರಾಟೊವ್ ಅವರ ನೊಬೆಲ್ ಪದಕವನ್ನು ಇದೇ 20ರ ವಿಶ್ವ ನಿರಾಶ್ರಿತರ ದಿನದಂದು ಬಹುಮಾನ ಸಮಿತಿಯ ಒಪ್ಪಿಗೆಯೊಂದಿಗೆ ಹರಾಜು ಇಡಲಾಗುತ್ತದೆ.

ಈ ಕುರಿತು ಪ್ರತಿಕ್ರಿಯಿಸಿರುವ ಮುರಾಟೊವ್‌, ‘ನನ್ನ ದೇಶವು ಉಕ್ರೇನ್‌ ಮೇಲೆ ‌ದಾಳಿ ನಡೆಸುತ್ತಿದೆ. ಈಗಾಗಲೇ 1.55 ಕೋಟಿ ಮಂದಿ ನಿರಾಶ್ರಿತರಾಗಿದ್ದಾರೆ. ಇವರಿಗಾಗಿ ಪ್ರತಿಯೊಬ್ಬರೂ ನೆರವು ನೀಡುವ ಅಗತ್ಯವಿದೆ’ ಎಂದು ತಿಳಿಸಿದ್ದಾರೆ.

ಮುರಾಟೊವ್‌ ‘ಬಿಯರ್‌–ಲೈಕ್‌’ ಸಹ ಸಂಸ್ಥಾಪಕ ಮತ್ತು ದೀರ್ಘಕಾಲ ‘ನೊವಾಯಾ ಗೆಜೆಟ್’ ದಿನಪತ್ರಿಕೆಯ ಸಂಪಾದಕರಾಗಿದ್ದರು.

ಮಾಧ್ಯಮದ ಮೇಲಿನ ಬಿಗಿ ನಿರ್ಬಂಧಗಳನ್ನು ದಿನಪತ್ರಿಕೆ ಧಿಕ್ಕರಿಸಿತ್ತು. ಸರ್ಕಾರ ವಿರೋಧಿ ವರದಿಗಳ ಕಾರಣದಿಂದ ಕಳೆದ ಮಾರ್ಚ್‌ನಲ್ಲಿ ಪತ್ರಿಕೆಯನ್ನು ಸ್ಥಗಿತಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT