ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಟಲಿಯಲ್ಲಿ ಭಾರತ ಮೂಲದವರ ಜತೆ ಸಂವಾದ ನಡೆಸಿದ ಪ್ರಧಾನಿ ಮೋದಿ

Last Updated 30 ಅಕ್ಟೋಬರ್ 2021, 8:12 IST
ಅಕ್ಷರ ಗಾತ್ರ

ರೋಮ್: ಜಿ20ರ ಶೃಂಗಸಭೆಯಲ್ಲಿ ಭಾಗವಹಿಸಲು ಇಟಲಿಯ ರೋಮ್‌ನಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿರುವ ಭಾರತೀಯ ಮೂಲದವರು ಮತ್ತು ಭಾರತದ ಬಗ್ಗೆ ಅಧ್ಯಯನ ನಡೆಸುತ್ತಿರುವವರ ಜತೆ ಚರ್ಚೆ ನಡೆಸಿದ್ದಾರೆ.

ಈ ಕುರಿತ ಚಿತ್ರಗಳನ್ನು ಮೋದಿ ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

‘ಕಳೆದ ಸಂಜೆ ರೋಮ್‌ನಲ್ಲಿ ನಾನು ಇಟಲಿಯಲ್ಲಿರುವ ಭಾರತೀಯ ಮೂಲದವರು ಮತ್ತು ಭಾರತದ ಬಗ್ಗೆ ಅಧ್ಯಯನ ನಡೆಸುತ್ತಿರುವವರ ಜತೆ ಸಂವಾದ ನಡೆಸಿದೆ. ವೈವಿಧ್ಯಮಯ ವಿಷಯಗಳ ಬಗ್ಗೆ ಅವರ ಅಭಿಪ್ರಾಯಗಳನ್ನು ಕೇಳುವುದೇ ಅದ್ಭುತವಾಗಿತ್ತು’ ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಸನಾತನ ಧರ್ಮ ಸಂಘದ ಅಧ್ಯಕ್ಷೆ ಸ್ವಾಮಿನಿ ಹಂಸಾನಂದ ಗಿರಿ ಅವರು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ‘ಹಿಂದೂಗಳು ಇಟಲಿಯಲ್ಲಿ ಅಲ್ಪಸಂಖ್ಯಾತರು. ಇಲ್ಲಿ ಭಾರತದ ಪ್ರಧಾನಿಯನ್ನು ಭೇಟಿಯಾಗಿರುವುದು ಸಂತಸ ತಂದಿದೆ. ಇದು ನಮಗೆ ದೊರೆತ ದೊಡ್ಡ ಗೌರವ’ ಎಂದು ಸ್ವಾಮಿನಿ ಬಣ್ಣಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT