ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಸಂಕ್ರಾಂತಿ ಶುಭಾಶಯ

Last Updated 14 ಜನವರಿ 2021, 5:25 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ವಿವಿಧ ಭಾಗಗಳಲ್ಲಿ, ವಿವಿಧ ಹೆಸರಿನಲ್ಲಿ ಗುರುವಾರ ಆಚರಿಸಲಾಗುತ್ತಿರುವ ಸುಗ್ಗಿ ಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ.

'ಎಲ್ಲರಿಗೂ, ವಿಶೇಷವಾಗಿ ತಮಿಳು ಸಹೋದರಿಯರು ಮತ್ತು ಸಹೋದರರಿಗೆ ಪೊಂಗಲ್ ಶುಭಾಶಯಗಳು. ಈ ವಿಶೇಷ ಉತ್ಸವವು ತಮಿಳು ಸಂಸ್ಕೃತಿಯ ಸಮೃದ್ಧತೆಯನ್ನು ಬಿಂಬಿಸುತ್ತದೆ. ಉತ್ತಮ ಆರೋಗ್ಯ ಮತ್ತು ಯಶಸ್ಸನ್ನು ನಾವೆಲ್ಲರೂ ಹೊಂದೋಣ. ಈ ಹಬ್ಬವು ಪ್ರಕೃತಿಯೊಂದಿಗೆ ಸಾಮರಸ್ಯದಿಂದ, ಸಹಾನುಭೂತಿಯಿಂದ ಬದುಕಲು ಈ ಹಬ್ಬ ನಮಗೆ ಪ್ರೇರಣೆಯಾಗಲಿ,' ಎಂದು ಅವರು ಆಶಿಸಿದ್ದಾರೆ.

ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಮಾಘ್‌ ಬಿಹು ಎಂದು ಕರೆಯಲಾಗುವ, ಸಾರ್ವತ್ರಿಕವಾಗಿ ಮಕರ ಸಂಕ್ರಾಂತಿ ಎಂದು ಕರೆಯಲಾಗುವ ಹಬ್ಬಕ್ಕೂ ಮೋದಿ ಪ್ರತ್ಯೇಕ ಟ್ವಿಟ್‌ಗಳ ಮೂಲಕ ಶುಭ ಕೋರಿದ್ದಾರೆ.

ಸೂರ್ಯ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವುದನ್ನೇ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಈ ಎಣಿಕೆಯಂತೆ ಹನ್ನೆರಡು ಸಂಕ್ರಾಂತಿಗಳು ಒಂದು ವರ್ಷದಲ್ಲಿ ಉಂಟಾಗುತ್ತವೆ. ಆದರೆ ಮಕರಸಂಕ್ರಾಂತಿಯನ್ನೇ ವಿಶೇಷವಾಗಿ ಆಚರಿಸಲು ಕಾರಣ ಎಂದರೆ ಸೂರ್ಯನು ತನ್ನ ಸಂಚಾರವನ್ನು ದಕ್ಷಿಣದಿಕ್ಕಿನಿಂದ ಉತ್ತರದ ಕಡೆಗೆ ತಿರುಗಿಸಿಕೊಳ್ಳುತ್ತಾನೆ ಎನ್ನುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT