ಶುಕ್ರವಾರ, ಡಿಸೆಂಬರ್ 2, 2022
19 °C

ಸೇನಾ ಮುಖ್ಯಸ್ಥರ ನೇಮಕ: ಲಂಡನ್‌ನಲ್ಲಿ ಅಣ್ಣನ ಭೇಟಿಯಾದ ಪಾಕ್‌ ಪ್ರಧಾನಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್‌/ ಇಸ್ಲಾಮಾಬಾದ್‌ : ಪಾಕಿಸ್ತಾನ ಪ್ರಧಾನಿ ಶೆಹಬಾಝ್ ಷರೀಫ್‌ ಅವರು ಪಿಎಂಎಲ್‌–ಎನ್‌ ಮುಖ್ಯಸ್ಥ ಹಾಗೂ ಅಣ್ಣ ನವಾಜ್ ಷರೀಫ್ ಅವರನ್ನು ಲಂಡನ್‌ನಲ್ಲಿ ಭೇಟಿಯಾಗಿ ಹೊಸ ಸೇನಾ ಮುಖ್ಯಸ್ಥರ ನೇಮಕದ ಕುರಿತು ಚರ್ಚೆ ನಡೆಸಿದ್ದಾರೆ ಎಂದು ‘ಡಾನ್’ ಪತ್ರಿಕೆ ಗುರುವಾರ ವರದಿ ಮಾಡಿದೆ.

ಈಜಿಪ್ಟ್‌ನಲ್ಲಿ ನಡೆಯುತ್ತಿರುವ ಸಿಒಪಿ27 ಹವಾಮಾನ ಸಮ್ಮೇಳನದಿಂದ ಲಂಡನ್‌ಗೆ ಖಾಸಗಿ ವಿಮಾನದಲ್ಲಿ ತೆರಳಿದ ಶೆಹಬಾಝ್‌, ನ.29ರಂದು ನಿವೃತ್ತರಾಗುತ್ತಿರುವ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್‌ ಖ್ವಮರ್ ಜಾವೇದ್‌ ಬಾಜ್ವಾ (61) ನಂತರದ ಹೊಣೆಯನ್ನು ಯಾರಿಗೆ ನೀಡಬಹುದು ಎಂಬುದರ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಶೆಹಬಾಝ್‌ ಅವರು ಈ ವರ್ಷದ ಏಪ್ರಿಲ್‌ನಲ್ಲಿ ಅಧಿಕಾರಕ್ಕೆ ಬಂದಿದ್ದು, ರಾಜಕೀಯ ನಿರ್ಣಯ ಅಥವಾ ಮಾರ್ಗದರ್ಶನ ಪಡೆಯಲು ತಮ್ಮ ಅಣ್ಣನನ್ನು ಭೇಟಿಯಾಗುತ್ತಿರುವುದು ಇದು 3ನೇ ಬಾರಿಯಾಗಿದೆ. ನವಾಜ್‌ ಷರೀಫ್ ಅವರು 2019ರ ನವೆಂಬರ್‌ನಲ್ಲಿ ಲಂಡನ್‌ಗೆ ವೈದ್ಯಕೀಯ ಚಿಕಿತ್ಸೆಗಾಗಿ ತೆರಳಿ, ಈಗ ಅಲ್ಲೇ ನೆಲೆಸಿದ್ದಾರೆ. ಅವರು 3 ಅವಧಿಗೆ ಪಾಕಿಸ್ತಾನದ ಪ್ರಧಾನಿ ಆಗಿ ಸೇವೆ ಸಲ್ಲಿಸಿದ್ದು, ಕನಿಷ್ಠ 4 ಸೇನಾ ಮುಖ್ಯಸ್ಥರನ್ನು ನೇಮಿಸಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು