ಮಂಗಳವಾರ, ಸೆಪ್ಟೆಂಬರ್ 21, 2021
22 °C

ಅಪಹರಣಕಾರನನ್ನು ಗುಂಡಿಕ್ಕಿ ಕೊಂದ ಅಮೆರಿಕ ಪೊಲೀಸರು

ಎಪಿ Updated:

ಅಕ್ಷರ ಗಾತ್ರ : | |

ಫ್ರ್ಯಾಂಕ್ಲಿನ್‌ (ಅಮೆರಿಕ): ಇಲ್ಲಿನ ವಿಸ್ಕಾನ್ಸಿನ್ ವಾಲ್‌ಮಾರ್ಟ್‌ ಬಳಿ ಅಪಹರಣಕಾರನೊಬ್ಬನನ್ನು ಪೊಲೀಸರು ಶುಕ್ರವಾರ ಗುಂಡಿಕ್ಕಿ ಹತ್ಯೆಗೈದಿದ್ದಾರೆ.

ಈ ಸಂಬಂಧ ಮಿಲ್ವಾಕೀ ಕೌಂಟಿ, ಫ್ರ್ಯಾಂಕ್ಲಿನ್‌ ಪೊಲೀಸ್‌ ಇಲಾಖೆ ಮತ್ತು ಓಕ್‌ ಕ್ರೀಕ್‌ ಪೊಲೀಸ್‌ ಇಲಾಖೆಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಿವೆ.

‘31 ವರ್ಷದ ಆರೋಪಿ ಮಿಲ್ವಾಕೀಯಲ್ಲಿ ಶುಕ್ರವಾರ ಮುಂಜಾನೆ ವ್ಯಕ್ತಿಯನ್ನು ಅಪಹರಿಸಿದ್ದಾನೆ. ಅಪಹರಣಕಾರ, ಸಂತ್ರಸ್ತನೊಂದಿಗೆ ವಾಲ್‌ಮಾರ್ಟ್‌ ಸೇರಿದಂತೆ ಮೂರು ಅಂಗಡಿಗಳಿಗೆ ಭೇಟಿ ನೀಡಿದ್ದಾನೆ. ಈ ವೇಳೆ ಅಪಹರಣಕ್ಕೆ ಒಳಗಾದ ವ್ಯಕ್ತಿ ಸಹಾಯಕ್ಕಾಗಿ ವಾಲ್‌ಮಾರ್ಟ್‌ ಸಿಬ್ಬಂದಿ ಬಳಿ ಅಂಗಲಾಚಿದ್ದಾನೆ. ಈ ಬಗ್ಗೆ ಪೊಲೀಸರಿಗೆ ವಾಲ್‌ಮಾರ್ಡ್‌ ಸಿಬ್ಬಂದಿ ಮಾಹಿತಿ ನೀಡಿದರು’ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

‘ಘಟನಾ ಸ್ಥಳಕ್ಕೆ ತೆರಳಿದ ಪೊಲೀಸ್‌ ಅಧಿಕಾರಿಗಳನ್ನು ನೋಡುತ್ತಿದ್ದಂತೆ ಅಲ್ಲಿಂದ ಪರಾರಿಯಾಗಲು ಆರೋಪಿ ಯತ್ನಿಸಿದ್ದಾನೆ. ಆರೋಪಿಯನ್ನು ಪೊಲೀಸರು ಬೆನ್ನಟ್ಟಿದ್ದಾರೆ. ಒಂದು ಹಂತದಲ್ಲಿ ಆರೋಪಿ ಪೊಲೀಸರತ್ತ ಗುಂಡು ಹಾರಿಸಲು ಯತ್ನಿಸಿದ್ದಾನೆ. ಆಗ ಪೊಲೀಸರು ಕೂಡಲೇ ಗುಂಡಿಕ್ಕಿ ಆತನನ್ನು ಹತ್ಯೆಗೈದಿದ್ದಾರೆ’ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು