ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಗಾಳಿಗೆ ಕರಗುತ್ತಿದೆ ಐಸ್‌ ಕ್ರೀಮ್‌: ಬೇಡಿಕೆ ಮಧ್ಯೆ ವಿದ್ಯುತ್‌ ಕಡಿತ

ಐಸ್‌ ಕ್ರೀಮ್ ದಾಸ್ತಾನು ಇರಿಸಿಕೊಳ್ಳಲು ಅಡ್ಡಿಯಾಗುತ್ತಿದೆ ಬಿಸಿಗಾಳಿ ಮತ್ತು ವಿದ್ಯುತ್ ಕಡಿತ
Last Updated 28 ಆಗಸ್ಟ್ 2022, 15:56 IST
ಅಕ್ಷರ ಗಾತ್ರ

ಗಾಝಾ: ಬಿಸಿಗಾಳಿಯ ಸಮಸ್ಯೆಗೆ ತುತ್ತಾಗಿರುವ ಗಾಝಾದಲ್ಲಿ ಬೇಡಿಕೆಯ ಮಧ್ಯೆಯೇ ವಿದ್ಯುತ್ ಕಡಿತದಿಂದ ಐಸ್‌ ಕ್ರೀಮ್ ನೀರಾಗುತ್ತಿದೆ.

ಗಾಝಾದಲ್ಲಿ ಬೇಸಿಗೆಯ ಬಿಸಿ ಏರುತ್ತಿದೆ. ತಾಪಮಾನ 34 ಡಿಗ್ರಿ ಸೆ.ಗೆ ಏರಿಕೆಯಾಗಿದೆ. ಈ ಮಧ್ಯೆ ತಂಪು ಪಾನೀಯ ಮತ್ತು ಐಸ್‌ ಕ್ರೀಮ್‌ಗೆ ಬೇಡಿಕೆ ಹೆಚ್ಚಾಗಿದೆ.

ಆದರೆ, ಬಿಸಿಗಾಳಿಯ ಸಮಸ್ಯೆ ಮಧ್ಯೆ ದೀರ್ಘ ಅವಧಿಯ ವಿದ್ಯುತ್ ಕಡಿತದಿಂದಾಗಿ ಗೋದಾಮುಗಳಲ್ಲಿ ಸಮಸ್ಯೆಯಾಗಿದೆ. ಶೀತಲೀಕರಣ ಮತ್ತು ದಾಸ್ತಾನು ಘಟಕಗಳಲ್ಲಿನ ಐಸ್‌ ಕ್ರೀಮ್ ಮತ್ತು ಇತರ ಆಹಾರ ಪದಾರ್ಥಗಳು ಕರಗಿ ಹೋಗುತ್ತಿವೆ.

ವಿದ್ಯುತ್ ಸಮಸ್ಯೆಯ ಜತೆಗೆ ಬಿಸಿ ಗಾಳಿ ಇರುವುದರಿಂದ ಮಳಿಗೆಗಳಲ್ಲಿ ಕೂಡ ದಾಸ್ತಾನು ಇರಿಸಿಕೊಳ್ಳಲು ಹಿಂದೇಟು ಹಾಕುವಂತಾಗಿದೆ. ಹೀಗಾಗಿ ಬೇಡಿಕೆ ಇದ್ದರೂ, ಜನರಿಗೆ ಐಸ್‌ಕ್ರೀಮ್ ಲಭ್ಯವಾಗುತ್ತಿಲ್ಲ ಎಂದು ವರದಿ ಹೇಳಿದೆ.

ಗಾಝಾದಲ್ಲಿ ದಿನವೊಂದಕ್ಕೆ ಸಾಮಾನ್ಯವಾಗಿ 500 ಮೆಗಾವಾಟ್ಸ್ ವಿದ್ಯುತ್ ಅಗತ್ಯವಿದೆ. ಆದರೆ, ಪ್ರಸ್ತುತ 180 ಮೆಗಾವ್ಯಾಟ್ ವಿದ್ಯುತ್ ಮಾತ್ರ ಲಭ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT