ಗುರುವಾರ , ಮೇ 13, 2021
35 °C

ಉತ್ತರ ಜಪಾನ್‌ನಲ್ಲಿ ಪ್ರಬಲ ಭೂಕಂಪ; ಸುನಾಮಿ ಅಪಾಯ ಇಲ್ಲ

ಎಪಿ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ:‘ ಉತ್ತರ ಜಪಾನ್‌ನಲ್ಲಿ ಶನಿವಾರ ಪ್ರಬಲ ಭೂಕಂಪ ಸಂಭವಿಸಿದೆ.ಈ ಭೂಕಂಪದಲ್ಲಿ ಯಾವುದೇ ಸಾವು–ನೋವು ಸಂಭವಿಸಿಲ್ಲ. ಅಲ್ಲದೆ ಇದರಿಂದಾಗಿ ಸುನಾಮಿಯ ಅಪಾಯವೂ ಕಂಡುಬಂದಿಲ್ಲ’ ಎಂದು ಮೂಲಗಳು ಹೇಳಿವೆ.

‘ರಿಕ್ಟರ್‌ ಮಾಪಕದಲ್ಲಿ ಕಂಪನದ ತೀವ್ರತೆ 6.6ರಷ್ಟು ದಾಖಲಾಗಿದೆ. ಕಂಪನದ ಕೇಂದ್ರ ಬಿಂದು 60 ಕಿ.ಮೀ ಆಳದಲ್ಲಿ ಪತ್ತೆಯಾಗಿದೆ’ ಎಂದು ಜಪಾನ್‌ ಹವಾಮಾನ ಸಂಸ್ಥೆ ಹೇಳಿದೆ. ಆದರೆ ಅಮೆರಿಕದ ಭೂ ಸರ್ವೇಕ್ಷಣಾ ಇಲಾಖೆಯು ಕಂಪನದ ತೀವ್ರತೆ 6.8ರಷ್ಟಿತ್ತು ಎಂದು ತಿಳಿಸಿದೆ.

‘ಈ ಭೂಕಂಪನದಿಂದ ಸಾರಿಗೆ ವ್ಯವಸ್ಥೆಗೆ ಅಡಚಣೆ ಉಂಟಾಗಿಲ್ಲ. ಆದರೆ ಸುರಕ್ಷತಾ ತಪಾಸಣೆಗಾಗಿ ಶಿಂಕಾನ್ಸೆನ್ ಬುಲೆಟ್ ರೈಲುಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕೆಲವೊಂದು ಸ್ಥಳೀಯ ರೈಲುಗಳು ತಡವಾಗಿ ಸಂಚರಿಸಿದವು’ ಎಂದು ಪೂರ್ವ ಜಪಾನ್‌ ರೈಲ್ವೆ ಮಾಹಿತಿ ನೀಡಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು