ಗುರುವಾರ , ಸೆಪ್ಟೆಂಬರ್ 29, 2022
26 °C

ಚೀನಾ: ಟಿಬೆಟ್‌ ಸಮೀಪದ ಪ್ರಾಂತ್ಯದಲ್ಲಿ ಪ್ರಬಲ ಭೂಕಂಪ–21 ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬೀಜಿಂಗ್‌: ಟಿಬೆಟ್‌ ಸಮೀಪದ ಚೀನಾದ ಸಿಚುವಾನ್‌ ಪ್ರಾಂತ್ಯದಲ್ಲಿ ಸೋಮವಾರ ರಿಕ್ಟರ್‌ ಮಾಪಕದಲ್ಲಿ 6.8ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದ್ದು, 21 ಮಂದಿ ಮೃತಪಟ್ಟಿದ್ದಾರೆ.

ಸಿಚುವಾನ್‌ ಪ್ರಾಂತ್ಯದ ರಾಜಧಾನಿ ಚೆಂಗ್‌ಡುವಿನಿಂದ 226 ಕಿ.ಮೀ.ದೂರದ ಲುಡಿಂಗ್‌ ಕೌಂಟಿಯ ಮುಖ್ಯ ಪಟ್ಟಣದ ಸಮೀಪ ಭೂಕಂಪದ ಕೇಂದ್ರಬಿಂದು ಇತ್ತು ಎಂದು ಚೀನಾ ಭೂಕಂಪನ ಜಾಲ ಕೇಂದ್ರವನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದೆ.

ಚೆಂಗ್‌ಡುವಿನಲ್ಲಿ ಸಹ ಭೂಕಂಪನದ ಅನುಭವವಾಗಿದೆ. ಅಲ್ಲಿ ಕಟ್ಟಡಗಳು ಅಲುಗಾಡುವ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಟಿಬೆಟ್ ಪ್ರಸ್ಥಭೂಮಿ ಭಾರಿ ಭೂಕಂಪಕ್ಕೆ ಕುಖ್ಯಾತಿ ಗಳಿಸಿದೆ. 2008ರಲ್ಲಿ ಇಲ್ಲಿ ಸಂಭವಿಸಿದ 8.2ರಷ್ಟು ತೀವ್ರತೆಯ ಭೂಕಂಪದಲ್ಲಿ 69 ಸಾವಿರ ಜನರು ಸತ್ತಿದ್ದರು ಹಾಗೂ 2013ರಲ್ಲಿ 7 ತೀವ್ರತೆಯ ಭೂಕಂಪದಲ್ಲಿ 200 ಮಂದಿ ಮೃತಪಟ್ಟಿದ್ದರು.

ಈ ಭಾಗದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಿರುವಂತೆಯೇ, ಭೂಕಂಪವೂ ಸಂಭವಿಸಿರುವುದರಿಂದ ಜನರ ಆತಂಕ ಇಮ್ಮಡಿಗೊಂಡಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು