ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ ಉತ್ತರ ಭಾಗದ ಅಭಿವೃದ್ಧಿಗೆ ತಮಿಳರು ಸಹಕಾರ ನೀಡಲಿ: ವಿಕ್ರಮಸಿಂಘೆ

Last Updated 11 ಫೆಬ್ರುವರಿ 2023, 13:43 IST
ಅಕ್ಷರ ಗಾತ್ರ

ಕೊಲಂಬೊ: ಸಂಘರ್ಷ ಪೀಡಿತ ದೇಶದ ಉತ್ತರ ಭಾಗದ ಅಭಿವೃದ್ಧಿಗೆ ತಮಿಳರು ಸಹಕಾರ ನೀಡಬೇಕು ಎಂದು ಶ್ರೀಲಂಕಾ ಅಧ್ಯಕ್ಷ ರಾನಿಲ್‌ ವಿಕ್ರಮಸಿಂಘೆ ಶನಿವಾರ ಹೇಳಿದರು.

ಜಾಫ್ನಾದಲ್ಲಿ ನಡೆದ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಅಧಿಕಾರ ವಿಕೇಂದ್ರೀಕರಣಕ್ಕೆ ನಮ್ಮ ಸರ್ಕಾರ ಬದ್ಧವಿದೆ. ಅಲ್ಪಸಂಖ್ಯಾತ ತಮಿಳರಿಗೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು. ಇದಕ್ಕಾಗಿ, ಭಾರತ ಪ್ರಾಯೋಜಕತ್ವದಲ್ಲಿ ಸಂವಿಧಾನಕ್ಕೆ ತರಲಾಗಿರುವ 13ನೇ ತಿದ್ದುಪಡಿಯನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುವ ಅಗತ್ಯವಿದೆ’ ಎಂದರು.

‘ದೇಶದ ಪೂರ್ವಭಾಗದಲ್ಲಿರುವ ಟ್ರಿಂಕಾಮಲೈ ಬಂದರು ಅಭಿವೃದ್ಧಿಗೆ ಭಾರತ ನೆರವು ನೀಡುವ ವಿಶ್ವಾಸ ಇದೆ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT