ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾ ವಿರುದ್ಧ ಉಕ್ರೇನ್‌ ಅನ್ನು ಸಾಧನವಾಗಿ ಬಳಸುತ್ತಿರುವ ಪಾಶ್ಚಾತ್ಯರು: ಪುಟಿನ್‌

Last Updated 21 ಫೆಬ್ರುವರಿ 2022, 16:05 IST
ಅಕ್ಷರ ಗಾತ್ರ

ಮಾಸ್ಕೋ: ಪಾಶ್ಚಾತ್ಯ ಶಕ್ತಿಗಳು ರಷ್ಯಾದ ಭದ್ರತೆಗೆ ಬೆದರಿಕೆಯೊಡ್ಡಲು ಉಕ್ರೇನ್‌ ಅನ್ನು ಸಾಧನವಾಗಿ ಬಳಸಿಕೊಳ್ಳುತ್ತಿವೆ ಎಂದು ವ್ಲಾಡಿಮಿರ್‌ ಪುಟಿನ್‌ ಸೋಮವಾರ ಹೇಳಿದ್ದಾರೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಸೋಮವಾರ ರಾಷ್ಟ್ರೀಯ ಭದ್ರತಾ ಮಂಡಳಿ ಸಭೆ ನಡೆಸಿದರು. ಈ ವೇಳೆ ಅವರು ತಮ್ಮ ಅಭಿಪ್ರಾಯಗಳನ್ನು ಪ್ರಕಟಿಸಿದ್ದಾರೆ.

ಉಕ್ರೇನ್‌ನ ಬಂಡುಕೋರರ ಹಿಡಿತದಲ್ಲಿರುವ ಎರಡು ಪ್ರದೇಶಗಳನ್ನು ಸ್ವತಂತ್ರ ಎಂದು ಪರಿಗಣಿಸುವ ನಿಟ್ಟಿನಲ್ಲಿ ಚಿಂತನೆ ನಡೆಸುವುದಾಗಿಯೂ ಪುಟಿನ್‌ ಇದೇ ವೇಳೆ ಪ್ರಕಟಿಸಿದರು.

ಪೂರ್ವ ಉಕ್ರೇನ್‌ನ ಡೊನೆಟ್‌ಸ್ಕ್‌ ಮತ್ತು ಲುಗಾನ್‌ಸ್ಕ್‌ನ ಪ್ರತ್ಯೇಕತಾವಾದಿ ಪ್ರದೇಶಗಳನ್ನು ಬಹಿರಂಗವಾಗಿ ಬೆಂಬಲಿಸುವ ರಷ್ಯಾ ನಿರ್ಧಾರವು ಪರಿಸ್ಥಿತಿಯನ್ನು ಮತ್ತಷ್ಟು ಕಗ್ಗಂಟಾಗಿಸುವ ಸಾಧ್ಯತೆಗಳಿವೆ.

‘ರಷ್ಯಾಕ್ಕೆ ಮುಖಾಮುಖಿಯಾಗಲು ಉಕ್ರೇನ್ ಅನ್ನು ಸಾಧನ್ನವನ್ನಾಗಿ ಬಳಸುವುದು ನಮಗೆ ಗಂಭೀರವಾದ, ದೊಡ್ಡ ಬೆದರಿಕೆಯನ್ನು ಒಡ್ಡುತ್ತದೆ. ರಷ್ಯಾದ ಮೊದಲ ಆದ್ಯತೆ ಘರ್ಷಣೆಯಲ್ಲ, ಭದ್ರತೆ’ ಎಂದು ಪುಟಿನ್‌ ಹೇಳಿದರು.

ಆದರೂ, ಉಕ್ರೇನ್ ಮತ್ತು ಅಮೆರಿಕ ಈಗ ಮುಖಾಮುಖಿಯಾಗಲು ನಿರೀಕ್ಷಿಸುತ್ತಿವೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT