ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರಿ ಸಾಧಿಸುವವರೆಗೂ ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆ: ಪುಟಿನ್‌

Last Updated 7 ಸೆಪ್ಟೆಂಬರ್ 2022, 13:59 IST
ಅಕ್ಷರ ಗಾತ್ರ

ಮಾಸ್ಕೋ: ‘ಉಕ್ರೇನ್‌ನಲ್ಲಿ ತನ್ನ ಗುರಿಗಳನ್ನು ಸಾಧಿಸುವವರೆಗೂ ರಷ್ಯಾ ಮಿಲಿಟರಿ ಕಾರ್ಯಾಚರಣೆಯನ್ನು ಮುಂದುವರಿಸಲಿದೆ’ ಎಂದುರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಬುಧವಾರ ಹೇಳಿದರು.

ಇದೇ ವೇಳೆ, ನಿರ್ಬಂಧ ವಿಧಿಸುವ ಮೂಲಕ ರಷ್ಯಾವನ್ನು ಮೂಲೆಗೆ ತಳ್ಳುವ ಪಾಶ್ಚಿಮಾತ್ಯ ಪ್ರಯತ್ನಗಳನ್ನು ಪುಟಿನ್‌ ಲೇವಡಿ ಮಾಡಿದರು.

ರಷ್ಯಾದ ಪೂರ್ವ ಭಾಗದಬಂದರು ನಗರವಾದ ವ್ಲಾಡಿವೋಸ್ಟಾಕ್‌ನಲ್ಲಿ ನಡೆದ ವಾರ್ಷಿಕ ಆರ್ಥಿಕ ವೇದಿಕೆಯಲ್ಲಿ ಮಾತನಾಡಿದ ಅವರು, ‘ಉಕ್ರೇನ್‌ ಪೂರ್ವದಲ್ಲಿರುವ ನಾಗರಿಕರನ್ನು ರಕ್ಷಿಸಲೆಂದೇ ಈ ಸೇನಾ ಕಾರ್ಯಾಚರಣೆ ನಡೆಸಲಾಗಿದೆ. ಎಂಟು ವರ್ಷಗಳಿಂದ ಅಲ್ಲಿ ನಾಗರಿಕರಿಗೆ ಹಿಂಸೆ ನೀಡಲಾಗುತ್ತಿತ್ತು’ ಎಂದರು.

‘ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು ನಾವಲ್ಲ. ನಾವು ಅದನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ಮಾಸ್ಕೋದಿಂದ ಹಿಂಪಡೆದ ಪ್ರದೇಶಗಳ ಜನರನ್ನು ರಕ್ಷಿಸಲು ಉಕ್ರೇನ್‌ಗೆ ಸೈನ್ಯವನ್ನು ಕಳುಹಿಸಿದ್ದೇವೆ’ ಎಂದು ಪ್ರತಿಪಾದಿಸಿದರು.

‘ನಮ್ಮ ಎಲ್ಲಾ ನಡೆಯು ಡಾನ್‌ಬಾಸ್‌ನಲ್ಲಿ ವಾಸಿಸುವ ಜನರಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿದೆ. ಇದು ನಮ್ಮ ಕರ್ತವ್ಯವಾಗಿದ್ದು, ಅದನ್ನು ಕೊನೆಯವರೆಗೂ ಪೂರೈಸುತ್ತೇವೆ’ ಎಂದು ಹೇಳಿದರು.

‘ರಷ್ಯಾ ಪಶ್ಚಿಮದ ವಾಣಿಜ್ಯ, ಆರ್ಥಿಕ ಮತ್ತು ತಾಂತ್ರಿಕ ಆಕ್ರಮಣವನ್ನು ವಿರೋಧಿಸಿದೆ. ನಾವು ಏನನ್ನೂ ಕಳೆದುಕೊಂಡಿಲ್ಲ. ಹಾಗೆಯೇ ಏನನ್ನೂ ಕಳೆದುಕೊಳ್ಳುವುದಿಲ್ಲ ಎಂದು ನನಗೆ ಖಾತ್ರಿಯಿದೆ. ನಮ್ಮ ಸಾರ್ವಭೌಮತ್ವವನ್ನು ಬಲಪಡಿಸುವುದು ಅತ್ಯಂತ ಮುಖ್ಯ.ರಷ್ಯಾದಲ್ಲಿ ವಾಣಿಜ್ಯ ಮತ್ತು ಆರ್ಥಿಕ ಪರಿಸ್ಥಿತಿಯು ಸ್ಥಿರವಾಗಿದೆ. ಹಣದುಬ್ಬರವು ಇಳಿಕೆಯಾಗಿದ್ದು, ನಿರುದ್ಯೋಗ ಕಡಿಮೆಯಾಗಿದೆ’ಎಂದು ಪುಟಿನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT