ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್, ಯೂರೋಪಿಯನ್ ಒಕ್ಕೂಟ ಸೇರುವುದಕ್ಕೆ ನಮ್ಮ ವಿರೋಧವಿಲ್ಲ: ಪುಟಿನ್

Last Updated 18 ಜೂನ್ 2022, 3:12 IST
ಅಕ್ಷರ ಗಾತ್ರ

ಮಾಸ್ಕೊ: ಉಕ್ರೇನ್, ಯೂರೋಪಿಯನ್ ಒಕ್ಕೂಟ ಸೇರುತ್ತಿರುವುದಕ್ಕೆ ರಷ್ಯಾ ವಿರೋಧವಿಲ್ಲ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.

27 ಸದಸ್ಯ ರಾಷ್ಟ್ರಗಳ ಯೂರೋಪಿಯನ್ ಒಕ್ಕೂಟದ ಸದಸ್ಯತ್ವಕ್ಕೆ ಯೂರೋಪಿಯನ್ ಕಮಿಷನ್ ಉಕ್ರೇನ್ ಅನ್ನು ಶಿಫಾರಸು ಮಾಡಿದ ಬೆನ್ನಲ್ಲೇ ಷ್ಯಾದಿಂದ ಈ ಹೇಳಿಕೆ ಹೊರಬಿದ್ದಿದೆ.

‘ಅದರ ಬಗ್ಗೆ ನಮ್ಮ ವಿರೋಧವಿಲ್ಲ. ಆರ್ಥಿಕ ಒಕ್ಕೂಟಕ್ಕೆ ಸೇರುವುದು ಅವರ ಪರಮಾಧಿಕಾರವಾಗಿದೆ. ಇದು ಅವರ ಉದ್ಯಮಕ್ಕೆ ಸಂಬಂಧಿಸಿದ ವಿಚಾರ’ಎಂದು ಸೇಂಟ್‌ ಪೀಟರ್ಸ್‌ಬರ್ಗ್‌ನಲ್ಲಿ ನಡೆದ ರಷ್ಯಾದ ವಾರ್ಷಿಕ ಆರ್ಥಿಕ ಸಮ್ಮೇಳನದಲ್ಲಿ ಅವರು ಹೇಳಿದ್ದಾರೆ.

ಉಕ್ರೇನ್, ನ್ಯಾಟೊ ಒಕ್ಕೂಟ ಸೇರಲು ಮುಂದಾಗಿದ್ದನ್ನು ವಿರೋಧಿಸಿ ರಷ್ಯಾ ಫೆಬ್ರುವರಿ 24ರಿಂದ ದಾಳಿ ನಡೆಸುತ್ತಿದೆ. ಉಕ್ರೇನ್ ನ್ಯಾಟೊಗೆ ಸೇರ್ಪಡೆಗೊಳ್ಳುವ ನಿರ್ಧಾರವು ತಮ್ಮ ಭದ್ರತೆಗೆ ಧಕ್ಕೆ ಎಂದು ರಷ್ಯಾ ಭಾವಿಸಿತ್ತು.

ಆದರೆ, 'ಅವರ ಆರ್ಥಿಕ ಏಕೀಕರಣಕ್ಕೆ ಸಂಬಂಧಿಸಿದ ನಿರ್ಧಾರವು ಅವರ ಆಯ್ಕೆಯಾಗಿದೆ’ಎಂದು ಪುಟಿನ್ ಹೇಳಿದರು.

‘ಯೂರೋಪಿಯನ್ ಒಕ್ಕೂಟ ಸೇರುವುದು ಒಂದು ಮಿಲಿಟರಿ ಮೈತ್ರಿ ಅಲ್ಲ, ಅದು ನ್ಯಾಟೊಗಿಂತ ಭಿನ್ನ’ಎಂದು ಪುಟಿನ್ ಹೇಳಿದರು.

ಉಕ್ರೇನ್, ಯೂರೋಪಿಯನ್ ಒಕ್ಕೂಟ ಸೇರ್ಪಡೆಗೊಳ್ಳಲು ಮುಂದಾದರೆ ಅದು ಪಾಶ್ಚಿಮಾತ್ಯ ದೇಶಗಳ ‘ಅರೆ-ವಸಾಹತು’ಪ್ರದೇಶವಾಗಿ ಬದಲಾಗುತ್ತದೆ. ‘ಇದು ನನ್ನ ಅಭಿಪ್ರಾಯ’ ಎಂದು ಪುಟಿನ್ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT