ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತರ ದೇಶಗಳು ಅಫ್ಗಾನಿಸ್ತಾನದ ಮೇಲೆ ತಮ್ಮ ಸಿದ್ಧಾಂತ ಹೇರಬಾರದು: ಪುಟಿನ್‌

Last Updated 20 ಆಗಸ್ಟ್ 2021, 16:27 IST
ಅಕ್ಷರ ಗಾತ್ರ

ಮಾಸ್ಕೋ: ಅಫ್ಗಾನಿಸ್ತಾನದ ಹೆಚ್ಚಿನ ಭಾಗವನ್ನು ತಾಲಿಬಾನ್ ತನ್ನ ವಶಕ್ಕೆ ತೆಗೆದುಕೊಂಡಿರುವುದು ವಾಸ್ತವ. ಇತರ ದೇಶಗಳು ತಮ್ಮ ಸಿದ್ಧಾಂತಗಳನ್ನು ಅಫ್ಗಾನಿಸ್ತಾನದ ಮೇಲೆ ಹೇರಬಾರದು ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.

ಅಫ್ಗಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡಿರುವ ಬಗ್ಗೆ ರಷ್ಯಾ ಅಧ್ಯಕ್ಷರು ನೀಡಿರುವ ಮೊದಲ ಹೇಳಿಕೆ ಇದಾಗಿದೆ. ಮಾಸ್ಕೋದಲ್ಲಿ ಜರ್ನಮಿಯ ಚಾನ್ಸಲರ್‌ ಏಂಜೆಲಾ ಮರ್ಕೆಲ್‌ ಜತೆ ಮಾತುಕತೆ ನಡೆಸಿದ ಬಳಿಕ ಪುಟಿನ್ ಅಫ್ಗಾನಿಸ್ತಾನದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಸುವ್ಯವಸ್ಥೆಯನ್ನು ಪುನಃಸ್ಥಾಪಿಸುವ ಭರವಸೆಯನ್ನು ತಾಲಿಬಾನ್ ಈಡೇರಿಸಬಹುದು ಎಂದು ಆಶಿಸುತ್ತೇನೆ. ಭಯೋತ್ಪಾದಕರು ನೆರೆಯ ದೇಶಗಳಿಗೆ ನುಸುಳದಂತೆ ತಡೆಯುವುದು ಮುಖ್ಯ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT