ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾನ್‌ಬಾಸ್‌ನಲ್ಲಿ ಸುದೀರ್ಘ ಯುದ್ಧ ಅಂತ್ಯವೇ ಕಾರ್ಯಾಚರಣೆ ಉದ್ದೇಶ: ಪುಟಿನ್‌

Last Updated 18 ಜನವರಿ 2023, 17:45 IST
ಅಕ್ಷರ ಗಾತ್ರ

ಸೇಂಟ್ ಪೀಟರ್ಸ್‌ಬರ್ಗ್‌( ರಷ್ಯಾ): ಪೂರ್ವ ಉಕ್ರೇನ್‌ನಲ್ಲಿ ಹಲವು ವರ್ಷಗಳಿಂದ ಉಲ್ಬಣಿಸಿರುವ ‘ಯುದ್ಧ’ವನ್ನು ಕೊನೆಗಾಣಿಸುವುದು ಉಕ್ರೇನ್‌ ಮೇಲಿನ ಸೇನಾ ಕ್ರಮದ ಉದ್ದೇಶವಾಗಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹೇಳಿದರು.

1943ರ 18ರಂದು ಸೇಂಟ್ ಪೀಟರ್ಸ್‌ಬರ್ಗ್‌ ನಗರವನ್ನು ನಾಜಿ ಮುತ್ತಿಗೆಯಿಂದ ಮುಕ್ತಗೊಳಿಸಿದ ಕೆಂಪು ಸೇನೆಯ 80ನೇ ವಾರ್ಷಿಕೋತ್ಸವ ನಿಮಿತ್ತ ನಗರದ ಪಿಸ್ಕರಿಯೊವ್ ಸ್ಮಾರಕಕ್ಕೆ ಗೌರವ ಸಲ್ಲಿಸಲು ಬುಧವಾರ ಅವರು ನಗರಕ್ಕೆ ಭೇಟಿ ನೀಡಿದ್ದರು.

ಇದೇ ವೇಳೆ ಹಿರಿಯರ ಜತೆ ಸಭೆ ನಡೆಸಿ ಪುಟಿನ್‌, ಉಕ್ರೇನ್ ಪೂರ್ವ ಕೈಗಾರಿಕಾ ಹೃದಯಭಾಗ ಡಾನ್‌ಬಾಸ್‌ನಲ್ಲಿನ ಸಂಘರ್ಷ ಇತ್ಯರ್ಥಪಡಿಸುವ ಬಗ್ಗೆ ಮಾತುಕತೆಗೆ ದೇಶವು ಬಹಳ ಹಿಂದಿನಿಂದಲೂ ಪ್ರಯತ್ನಿಸಿದೆ. ಅಲ್ಲಿ 2014ರಿಂದ ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳು ಉಕ್ರೇನ್‌ ಸೇನೆ ವಿರುದ್ಧ ಹೋರಾಡುತ್ತಿದ್ದಾರೆ ಎಂದರು.

ಡಾನ್‌ಬಾಸ್‌ನಲ್ಲಿ ಭಾರಿ ಶಸ್ತ್ರಾಸ್ತ್ರಗಳು, ಫಿರಂಗಿ, ಟ್ಯಾಂಕ್‌ಗಳು ಮತ್ತು ವಿಮಾನಗಳನ್ನು ಒಳಗೊಂಡ ದೊಡ್ಡ ಯುದ್ಧ ಕಾರ್ಯಾಚರಣೆಗಳು ನಿಂತಿಲ್ಲ. ವಿಶೇಷ ಸೇನಾ ಕಾರ್ಯಾಚರಣೆಯ ಭಾಗವಾಗಿ ನಾವು ಇಂದು ಅವುಗಳನ್ನು ಬಳಸುತ್ತಿರುವುದು ಆ ಯುದ್ಧ ನಿಲ್ಲಿಸುವ ಪ್ರಯತ್ನವಾಗಿದೆ. ನಮ್ಮ ಕಾರ್ಯಾಚರಣೆಯು ಆ ಪ್ರದೇಶಗಳ ಜನರ ರಕ್ಷಣೆ ಮಾಡುವುದಾಗಿದೆ ಎಂದು ಪುಟಿನ್‌ ಹೇಳಿದರು.

‘ಉಕ್ರೇನ್‌ಗೆ ಸೇನೆ ಕಳುಹಿಸುವ ಮೊದಲು ರಷ್ಯಾ ಶಾಂತಿಯುತ ಇತ್ಯರ್ಥಕ್ಕೆ ಮಾತುಕತೆಗೆ ಪ್ರಯತ್ನಿಸಿದೆ. ಆದರೆ ನಾವು ಕೇವಲ ವಂಚನೆ ಮತ್ತು ಮೋಸಕ್ಕೆ ಒಳಗಾದೆವು’ ಎಂದು ಪುಟಿನ್‌ ವಿಷಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT