ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ ದಾಳಿ: ರಷ್ಯಾದ ಉನ್ನತ ಸೇನಾಧಿಕಾರಿ ಹತ್ಯೆ

Last Updated 6 ಜೂನ್ 2022, 19:30 IST
ಅಕ್ಷರ ಗಾತ್ರ

ಮಾಸ್ಕೊ/ಕೀವ್‌/ಲಂಡನ್‌ (ಎಎಫ್‌ಪಿ/ರಾಯಿಟರ್ಸ್‌):ಉಕ್ರೇನ್‌ನ ಪೂರ್ವದ ಸೆವೆರೊಡೊನ್‌ಟ್‌ಸ್ಕ್‌ನಲ್ಲಿ ಯುದ್ಧ ಭೀಕರ ಸ್ವರೂಪ ಪಡೆದಿದ್ದು, ಉಕ್ರೇನ್‌ ದಾಳಿಗೆ ರಷ್ಯಾದ ಉನ್ನತ ಸೇನಾಧಿಕಾರಿ ಸೋಮವಾರ ಹತರಾಗಿದ್ದಾರೆ.

ಪೂರ್ವದ ಡಾನ್‌ಬಾಸ್‌ನಲ್ಲಿ ‌ನಡೆದ ಕಾಳಗದಲ್ಲಿ ರಷ್ಯಾ ಹಿಡಿತದ ಡೊನೆಟ್‌ಸ್ಕ್‌ ಗಣರಾಜ್ಯದ ಪಡೆಗಳಿಗೆ ಕಮಾಂಡರ್‌ ಆಗಿದ್ದಮೇಜರ್ ಜನರಲ್ ರೋಮನ್ ಕುಟುಜೋವ್ ಬಲಿಯಾಗಿದ್ದಾರೆ. ಈವರೆಗೆ 12 ಮಂದಿ ಸೇನಾಧಿಕಾರಿಗಳು ಹತರಾಗಿದ್ದಾರೆ ಎಂದು ವರದಿ ತಿಳಿಸಿದೆ

ಉಕ್ರೇನ್‌ಗೆ ದೂರಗಾಮಿ ಕ್ಷಿಪಣಿಗಳನ್ನು ಪೂರೈಸಿದರೆ, ‘ನಾವು ವಿನಾಶಕಾರಿ ಶಸ್ತ್ರಾಸ್ತ್ರಗಳನ್ನು ಬಳಸಬೇಕಾಗುತ್ತದೆ’ ಎಂದು ರಷ್ಯಾ ಅಧ್ಯಕ್ಷ ಪುಟಿನ್‌ ನೀಡಿದ್ದ ಎಚ್ಚರಿಕೆಯ ಹಿಂದೆಯೇ, ಹಿಮಾರ್ಸ್‌ (ಎಂ142 ಹೈ ಮೊಬಿಲಿಟಿ ಆರ್ಟಿಲರಿ ರಾಕೆಟ್ ಸಿಸ್ಟಮ್ಸ್) ಕ್ಷಿಪಣಿ ವ್ಯವಸ್ಥೆ, ಎಂ270 ಬಹು ಉಡಾವಣಾ ವ್ಯವಸ್ಥೆಯ ಕ್ಷಿಪಣಿ ಪೂರೈಕೆ ನಿರ್ಧಾರದಲ್ಲಿ ಬದಲಾವಣೆಯಿಲ್ಲ ಎಂದು ಅಮೆರಿಕ ಮತ್ತು ಬ್ರಿಟನ್‌ ಸ್ಪಷ್ಟಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT