ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ಗೆ ದೂರಗಾಮಿ ಕ್ಷಿಪಣಿ ಪೂರೈಸದಿರಿ: ಪುಟಿನ್‌ ಎಚ್ಚರಿಕೆ

ಪಶ್ಚಿಮದ ರಾಷ್ಟ್ರಗಳಿಗೆ ರಷ್ಯಾ ಅಧ್ಯಕ್ಷ ಪುಟಿನ್‌ ಎಚ್ಚರಿಕೆ; ಕೀವ್‌ ಭದ್ರಕೋಟೆ ಭೇದಿಸಲು ಕ್ಷಿಪಣಿ ಸುರಿಮಳೆ
Last Updated 5 ಜೂನ್ 2022, 16:26 IST
ಅಕ್ಷರ ಗಾತ್ರ

ಮಾಸ್ಕೊ/ಕೀವ್‌ (ಎಪಿ/ಎಎಫ್‌ಪಿ): ‘ಉಕ್ರೇನ್‌ಗೆ ದೂರಗಾಮಿ ಕ್ಷಿಪಣಿಗಳನ್ನು ಪೂರೈಸಿದರೆ, ಅದಕ್ಕೆ ತಕ್ಕನಾದ ಶಸ್ತ್ರಾಸ್ತ್ರಗಳನ್ನು ನಾವು ಬಳಸುತ್ತೇವೆ’ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌,ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳಿಗೆ ಭಾನುವಾರ ಹೊಸ ಎಚ್ಚರಿಕೆ ನೀಡಿದ್ದಾರೆ.

‘ಕೀವ್‌ಗೆ ದೂರಗಾಮಿ ಕ್ಷಿಪಣಿಗಳನ್ನು ಪೂರೈಸುವ ಪಶ್ಚಿಮದ ರಾಷ್ಟ್ರಗಳ ನಿರ್ಧಾರ, ಸಂಘರ್ಷವನ್ನು ಸಾಧ್ಯವಾದಷ್ಟು ಕಾಲ ವಿಸ್ತರಿಸುವ ಏಕೈಕ ಉದ್ದೇಶ ಹೊಂದಿದೆ. ಇದಕ್ಕೆ ಪ್ರತ್ಯುತ್ತರವಾಗಿ, ನಾವು ಮುಟ್ಟದೇ ಬಿಟ್ಟಿರುವ ಹೊಸ ಗುರಿಗಳನ್ನು ಹೊಡೆಯುವ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದು ಪುಟಿನ್‌ ಎಚ್ಚರಿಸಿರುವುದಾಗಿ ರಷ್ಯಾದ ಸುದ್ದಿ ಸಂಸ್ಥೆ ಹೇಳಿದೆ.

ಅಮೆರಿಕವು ಉಕ್ರೇನ್‌ಗೆ ಹಿಮಾರ್ಸ್‌ ಕ್ಷಿಪಣಿ ವ್ಯವಸ್ಥೆ ಪೂರೈಸುವುದಾಗಿ ಘೋಷಿಸಿರುವ ಬೆನ್ನಲ್ಲೇ ಪುಟಿನ್‌ ಈ ಎಚ್ಚರಿಕೆ ನೀಡಿದ್ದಾರೆ.

ಬಹುವಿಧದ ಉಡಾವಣೆಯಸಂಚಾರಿ ಕ್ಷಿಪಣಿ ವ್ಯವಸ್ಥೆ ‘ಹಿಮಾರ್ಸ್’ನಿಂದ ಏಕಕಾಲದಲ್ಲಿ ಹಲವು ನಿಖರ-ನಿರ್ದೇಶಿತ ಕ್ಷಿಪಣಿಗಳನ್ನು 80 ಕಿ.ಮೀ ದೂರಕ್ಕೆ ಉಡಾಯಿಸಬಹುದು. ಅಮೆರಿಕ ಅಧ್ಯಕ್ಷ ಜೋ ಬೈಡನ್‌, ರಷ್ಯಾದ ಗಡಿ ದಾಟುವಂತಹ ದೂರಗಾಮಿ ಕ್ಷಿಪಣಿಗಳನ್ನು ಉಕ್ರೇನ್‌ಗೆ ಪೂರೈಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು.

ರೋಸ್ಸಿಯಾ –1 ಟಿ.ವಿಗೆ ಭಾನುವಾರ ನೀಡಿದ ಸಂದರ್ಶನದಲ್ಲಿ ಪುಟಿನ್‌ ಉಲ್ಲೇಖಿಸಿರುವ ಹೊಸ ಗುರಿಗಳು ಉಕ್ರೇನ್‌ ಗಡಿಯೊಳಗೆ ಅಥವಾ ಗಡಿಯಾಚೆಗೆ ಇವೆಯೇ, ಮಾಸ್ಕೊ ಯಾವ ಶಸ್ತಾಸ್ತ್ರಗಳನ್ನು ಬಳಸಬಹುದು ಎನ್ನುವುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ.

‘ಅಮೆರಿಕವು ಪೂರೈಸಿರುವ ಶಸ್ತ್ರಾಸ್ತ್ರಗಳಲ್ಲಿ ಹೊಸದೇನು ಇಲ್ಲ. ಇವು ಸೋವಿಯತ್‌ ಯುಗದ ಶಸ್ತ್ರಾಸ್ತ್ರಗಳನ್ನು ಹೋಲುತ್ತವೆ. ಇವುಗಳ ಗುರಿ ವ್ಯಾಪ್ತಿ 60ರಿಂದ 75 ಕಿ.ಮೀ. ಅಷ್ಟೇ’ ಎಂದು ಪುಟಿನ್‌ ಹೇಳಿದ್ದಾರೆ.

ಯುದ್ಧ ಟ್ಯಾಂಕ್‌ಗಳು ಧ್ವಂಸ
ಕೀವ್‌ ಮೇಲೆ ಭಾನುವಾರ ನಸುಕಿನಲ್ಲಿ ವಾಯು ಮತ್ತು ಕ್ಷಿಪಣಿ ದಾಳಿ ನಡೆಸಿ, ಪಶ್ಚಿಮ ದೇಶಗಳು ಪೂರೈಸಿದ್ದ ಯುದ್ಧ ಟ್ಯಾಂಕ್‌ಗಳು, ಪ್ರಮುಖ ಶಸ್ತ್ರಾಸ್ತ್ರಗಳನ್ನು ನಾಶಗೊಳಿಸಲಾಗಿದೆ.ರಾಜಧಾನಿ ಗುರಿಯಾಗಿಸಿ ಕ್ಷಿಪಣಿಗಳ ಸುರಿಮಳೆಗರೆದಿರುವ ರಷ್ಯಾ ಸೇನೆ, ರೈಲ್ವೆ ಸೌಲಭ್ಯಗಳು ಮತ್ತು ಇತರ ಮೂಲಸೌಕರ್ಯಗಳನ್ನು ಧ್ವಂಸಗೊಳಿಸಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ಹೇಳಿದೆ.

ಕ್ಯಾಸ್ಪಿಯನ್ ಸಮುದ್ರದಿಂದ ರಷ್ಯಾ ಉಡಾಯಿಸಿರುವ ಕ್ಷಿಪಣಿಗಳು ಮತ್ತು ವೈಮಾನಿಕ ಬಾಂಬ್‌ ದಾಳಿಗಳು ಕೀವ್‌ನ
ಹೊರವಲಯದ ಡಾರ್ನಿಟ್‌ಸ್ಕಿ ಮತ್ತು ನಿಪ್ರೊವ್‌ಸ್ಕಿ ಜಿಲ್ಲೆಗಳಲ್ಲಿ ಭಾರಿ ಹಾನಿ ಮಾಡಿವೆ.

ಕೀವ್‌ನಿಂದರಷ್ಯಾ ಸೇನೆ ಹಿಂಪಡೆದು, ಪೂರ್ವದ ಡಾನ್‌ಬಾಸ್‌ ಮತ್ತು ಲುಹಾನ್‌ಸ್ಕ್‌ಗೆ ನಿಯೋಜಿಸಿತ್ತು. ಐದು ವಾರಗಳಿಂದ ಕೀವ್‌ ಶಾಂತವಾಗಿತ್ತು. ವಿಶ್ವಸಂಸ್ಥೆ ಮುಖ್ಯಸ್ಥಆಂಟೋನಿಯೊ ಗುಟೆರೆಸ್ಏಪ್ರಿಲ್ 28ರಂದು ಕೀವ್‌ಗೆ ಭೇಟಿ ನೀಡಿದ ನಂತರ, ರಷ್ಯಾದ ದಾಳಿ ನಡೆದಿರಲಿಲ್ಲ. ಈ ದಾಳಿ ಉಕ್ರೇನಿನ ಹೃದಯಭಾಗ ಛಿದ್ರಗೊಳಿಸುವ ಸಾಮರ್ಥ್ಯ ಮತ್ತು ಗುರಿಯನ್ನು ರಷ್ಯಾ ಹೊಂದಿದೆ ಎನ್ನುವುದನ್ನು ಸೂಚಿಸಿದೆ.

ಕೀವ್‌ ಗುರಿಯಾಗಿಸಿರಷ್ಯಾ ಉಡಾಯಿಸಿದ ಕ್ಷಿಪಣಿ ಮೈಕೋಲೈವ್‌ನ ಅಣು ವಿದ್ಯುತ್ ಸ್ಥಾವರದ ಮೇಲೆ ಅಪಾಯಕಾರಿ ಮಟ್ಟದಲ್ಲಿ ಹಾರಿ ಹೋಗಿದೆ.ಹಾರ್ಕಿವ್‌ ಬಳಿಯ ಚೆರ್ಕಾಸ್ಕಿ ಟಿಶ್ಕಿ ಹಳ್ಳಿ ಮೇಲೆ ರಷ್ಯಾದಿಂದ ರಂಜಕದ (ಫಾಸ್ಫರಸ್‌) ಬಾಂಬ್‌ ದಾಳಿ ನಡೆದಿದೆ ಎಂದು ಉಕ್ರೇನ್‌ ಹೇಳಿದೆ.

ಕೀವ್‌ ಮೇಲೆ ಕ್ಷಿಪಣಿಗಳ ಸುರಿಮಳೆ
ಕೀವ್‌ ಮೇಲೆ ಭಾನುವಾರ ನಸುಕಿನಲ್ಲಿ ವಾಯು ಮತ್ತು ಕ್ಷಿಪಣಿ ದಾಳಿ ನಡೆಸಿ, ಪಶ್ಚಿಮ ದೇಶಗಳು ಪೂರೈಸಿದ್ದ ಯುದ್ಧ ಟ್ಯಾಂಕ್‌ಗಳು, ಪ್ರಮುಖ ಶಸ್ತ್ರಾಸ್ತ್ರಗಳನ್ನು ನಾಶಗೊಳಿಸಲಾಗಿದೆ.ರಾಜಧಾನಿ ಗುರಿಯಾಗಿಸಿ ಕ್ಷಿಪಣಿಗಳ ಸುರಿಮಳೆಗರೆದಿರುವ ರಷ್ಯಾ ಸೇನೆ, ರೈಲ್ವೆ ಸೌಲಭ್ಯಗಳು ಮತ್ತು ಇತರ ಮೂಲಸೌಕರ್ಯಗಳನ್ನು ಧ್ವಂಸಗೊಳಿಸಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ಹೇಳಿದೆ.

ಕ್ಯಾಸ್ಪಿಯನ್ ಸಮುದ್ರದಿಂದ ರಷ್ಯಾ ಉಡಾಯಿಸಿರುವ ಕ್ಷಿಪಣಿಗಳು ಮತ್ತು ವೈಮಾನಿಕ ಬಾಂಬ್‌ ದಾಳಿಗಳು ಕೀವ್‌ ಹೊರವಲಯದ ಡಾರ್ನಿಟ್‌ಸ್ಕಿ ಮತ್ತು ನಿಪ್ರೊವ್‌ಸ್ಕಿ ಜಿಲ್ಲೆಗಳಲ್ಲಿ ಭಾರಿ ಹಾನಿ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT