ಸೋಮವಾರ, ಮಾರ್ಚ್ 27, 2023
30 °C

ಇಂಡೋನೇಷ್ಯಾ ಜ್ವಾಲಾಮುಖಿ: ಮಳೆಯಿಂದ ಶೋಧ ಕಾರ್ಯಕ್ಕೆ ಅಡ್ಡಿ

ಎಪಿ Updated:

ಅಕ್ಷರ ಗಾತ್ರ : | |

Prajavani

ಲುಮಾಜಂಗ್: ಇಂಡೋನೇಷ್ಯಾದ ಜಾವಾ ದ್ವೀಪದ ಸೆಮೆರು ಪರ್ವತದಲ್ಲಿ ಕಳೆದ ಶನಿವಾರ ಜ್ವಾಲಾಮುಖಿ ಭುಗಿಲೆದ್ದ ಪ್ರದೇಶದಲ್ಲಿ ಇದೀಗ ಭಾರಿ ಮಳೆ ಸುರಿಯುತ್ತಿದ್ದು, ಲಾವಾರಸದಿಂದ ಉತ್ಪತ್ತಿಯಾದ ಬೂದಿ ಮಿಶ್ರಿತ ಮಣ್ಣು ಪ್ರವಾಹದ ರೀತಿಯಲ್ಲಿ ಕೆಳಗೆ ಜಾರಿ ಬರುತ್ತಿದೆ. ಇದರಿಂದಾಗಿ ನಾಪತ್ತೆಯಾಗಿರುವ 16ಕ್ಕೂ ಅಧಿಕ ಜನರ ಶೋಧ ಕಾರ್ಯಕ್ಕೆ ಅಡ್ಡಿ ಉಂಟಾಗಿದೆ.

ಜ್ವಾಲಾಮುಖಿಯಿಂದ ಕನಿಷ್ಠ 34 ಮಂದಿ ಮೃತಪಟ್ಟಿದ್ದಾರೆ.

‘3,676 ಮೀಟರ್ ಎತ್ತರದ ಪರ್ವತದಿಂದ ಬಿಸಿ ಲಾವಾರಸ ಈಗಲೂ ಹರಿಯುತ್ತಲೇ ಇದೆ. ಭಾರಿ ಮಳೆಯ ಜತೆಗೆ ಜ್ವಾಲಾಮುಖಿಯ ಬೂದಿ, ಮಣ್ಣು ಮಣ್ಣು ಹಳ್ಳಿಗಳನ್ನು ತುಂಬಿಕೊಂಡಿದೆ. ಇದರಿಂದ ರಸ್ತೆಗಳು ಮುಚ್ಚಿಹೋಗಿದ್ದು, ಮನೆಗಳು ಒಂದು ಮೀಟರ್ ಎತ್ತರದ ಮಣ್ಣಿನ ಪದರಗಳಿಂದ ಹೂತುಹೋಗಿವೆ ಎಂದು ಮೌಂಟ್‌ ಸೆಮೆರು ತುರ್ತು ವಿಕೋಪ ಸ್ಪಂದನಾ ಕಮಾಂಡ್‌ನ ಕಮಾಂಡರ್ ಇರ್ವನ್‌ ಸುಬೇಕ್ತಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು