ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಡನ್‌ ಆಡಳಿತದ ಪ್ರಮುಖ ಹುದ್ದೆಗಳಿಗೆ 130ಕ್ಕೂ ಹೆಚ್ಚು ಭಾರತೀಯ–ಅಮೆರಿಕನ್ನರ ನೇಮಕ

Last Updated 24 ಆಗಸ್ಟ್ 2022, 11:19 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಆಡಳಿತದ ವಿವಿಧ ವಿಭಾಗಗಳ ಪ್ರಮುಖ ಹುದ್ದೆಗಳಿಗೆ 130ಕ್ಕೂ ಹೆಚ್ಚು ಭಾರತೀಯ–ಅಮೆರಿಕನ್ನರನ್ನು ನೇಮಕ ಮಾಡಿದ್ದಾರೆ.

ಈ ಮೂಲಕ, ಆಡಳಿತದ ವಿವಿಧ ಹಂತಗಳ ನೇಮಕಾತಿಯಲ್ಲಿ ಭಾರತೀಯ–ಅಮೆರಿಕನ್ನರಿಗೆ ಹೆಚ್ಚು ಪ್ರಾತಿನಿಧ್ಯ ನೀಡುವುದಾಗಿ 2020ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆ ವೇಳೆ ನೀಡಿದ್ದ ಭರವಸೆಯನ್ನು ಬೈಡನ್‌ ಅವರು ಈಡೇರಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಡೊನಾಲ್ಡ್‌ ಟ್ರಂಪ್‌ ಅವರು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ 80ಕ್ಕೂ ಹೆಚ್ಚು ಹಾಗೂ ಬರಾಕ್‌ ಒಬಾಮ ಅವರ ಅಧಿಕಾರಾವಧಿಯಲ್ಲಿ 60ಕ್ಕೂ ಹೆಚ್ಚು ಭಾರತೀಯ–ಅಮೆರಿಕನ್ನರನ್ನು ನೇಮಕ ಮಾಡಲಾಗಿತ್ತು. ಹಾಗಾಗಿ, ಬೈಡನ್‌ ಅವರು ಹೆಚ್ಚಿನ ಸಂಖ್ಯೆಯ ಭಾರತೀಯ–ಅಮೆರಿಕನ್ನರಿಗೆ ಮಣೆ ಹಾಕುವ ಮೂಲಕ ಈ ಹಿಂದಿನ ದಾಖಲೆ ಮುರಿದಿದ್ದಾರೆ ಎಂದೂ ತಿಳಿಸಿವೆ.

‘ಭಾರತೀಯ–ಅಮೆರಿಕನ್ನರು ತಮ್ಮ ಸೇವಾ ಮನೋಭಾವದಿಂದ ಗಮನ ಸೆಳೆದಿದ್ದಾರೆ. ಸರ್ಕಾರ ಹಾಗೂ ಖಾಸಗಿ ವಲಯದ ಪ್ರಮುಖ ಹುದ್ದೆಗಳಿಗೆ ನಡೆದಿರುವ ನೇಮಕಾತಿಯೇ ಇದಕ್ಕೆ ಸಾಕ್ಷಿ’ ಎಂದು ಸಿಲಿಕಾನ್‌ ವ್ಯಾಲಿಯಲ್ಲಿ ಉದ್ಯಮಿಯಾಗಿರುವ ಎಂ.ಆರ್‌.ರಂಗಸ್ವಾಮಿ ಹೇಳಿದ್ದಾರೆ.

ಅಮೆರಿಕ ಜನಸಂಖ್ಯೆಯಲ್ಲಿ ಭಾರತೀಯ ಸಮುದಾಯದ ಪ್ರಮಾಣ ಶೇ 1ರಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT