ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಬೈ: ಯೆಮೆನ್‌ನ ಹೂಥಿ ಬಂಡುಕೋರರ ವಶದಲ್ಲಿದ್ದ 14 ಭಾರತೀಯ ನಾವಿಕರ ಬಿಡುಗಡೆ

Last Updated 6 ಡಿಸೆಂಬರ್ 2020, 7:48 IST
ಅಕ್ಷರ ಗಾತ್ರ

ದುಬೈ: ಯೆಮೆನ್‌ನ ಬಂಡುಕೋರ ಸಂಘಟನೆ ಹೂಥಿ ವಶದಲ್ಲಿ 14 ಭಾರತೀಯ ನಾವಿಕರನ್ನು ಬಿಡುಗಡೆ ಮಾಡಲಾಗಿದ್ದು, ದುಬೈನಿಂದ ಅವರು ಭಾರತಕ್ಕೆ ಶನಿವಾರ ತೆರಳಿದರು.

ಭಾರತೀಯ ನಾವಿಕರಿದ್ದ ಹಡಗು ಯೆಮೆನ್‌ ಬಳಿಯ ಆಡೆನ್‌ ಕೊಲ್ಲಿಯಲ್ಲಿ ಮುಳುಗಿತು. ಇವರನ್ನು ಫೆಬ್ರುವರಿ 14ರಂದು ಹೂಥಿ ಸಂಘಟನೆ ತನ್ನ ವಶಕ್ಕೆ ತೆಗೆದುಕೊಂಡಿತ್ತು ಎಂದು ಯೆಮೆನ್‌ನಲ್ಲಿನ ಭಾರತೀಯ ರಾಯಭಾರ ಕಚೇರಿ ಪ್ರಕಟಣೆ ತಿಳಿಸಿದೆ.

‘ಹೌಥಿ ವಶದಲ್ಲಿದ್ದ ಭಾರತೀಯ ನಾವಿಕರು ತಮ್ಮ ಪಾಸ್‌ಪೋರ್ಟ್‌ ಸೇರಿದಂತೆ ಎಲ್ಲ ದಾಖಲೆಗಳನ್ನು ಕಳೆದುಕೊಂಡಿದ್ದರು. ಈ ನಾವಿಕರು ಎದುರಿಸುತ್ತಿದ್ದ ಪರಿಸ್ಥಿತಿಯನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಮನವರಿಕೆ ಮಾಡಲಾಯಿತು. ಸತತ ಪ್ರಯತ್ನದ ಫಲವಾಗಿ ಇವರನ್ನು ನ.28ರಂದು ಬಿಡುಗಡೆ ಮಾಡಲಾಯಿತು’ ಎಂದೂ ಪ್ರಕಟಣೆ ತಿಳಿಸಿದೆ.

‘ಈ 14 ಜನ ನಾವಿಕರಿಗೆ ಕಳೆದ 10 ತಿಂಗಳ ವೇತನ ನೀಡಿಲ್ಲ. ಕೂಡಲೇ ಬಾಕಿ ವೇತನವನ್ನು ನೀಡುವಂತೆ ತಾವು ಉದ್ಯೋಗದಲ್ಲಿದ್ದ ಒಮಾನ್‌ ಮೂಲದ ಕಂಪನಿ ಹಾಗೂ ಅಲ್ಲಿನ ಸರ್ಕಾರವನ್ನು ಈ ನಾವಿಕರು ಒತ್ತಾಯಿಸಿದ್ದಾರೆ’ ಎಂದು ಗಲ್ಫ್‌ ಮಹಾರಾಷ್ಟ್ರ ಬಿಸಿನೆಸ್‌ ಫೋರಂನ ಚಂದ್ರಶೇಖರ್‌ ಭಾಟಿಯಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT