ಮಂಗಳವಾರ, ಜನವರಿ 19, 2021
18 °C

ಭಾರತೀಯ –ಅಮೆರಿಕನ್ ಲೇಖಕ ವೇದ್ ಮೆಹ್ತಾ ನಿಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನ್ಯೂಯಾರ್ಕ್: ಅಂಧತ್ವವನ್ನು ಮೀರಿ ಬೆಳೆದ, ತಮ್ಮ ಬರವಣಿಗೆಯ ಮೂಲಕ ಅಮೆರಿಕಕ್ಕೆ ಭಾರತವನ್ನು ಪರಿಚಯಿಸಿದ ಅಮೆರಿಕನ್–ಭಾರತೀಯ ಲೇಖಕ ವೇದ್ ಮೆಹ್ತಾ (86) ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.‌

ಲಾಹೋರ್‌ನ ಪಂಜಾಬಿ ಕುಟುಂಬದಲ್ಲಿ 1934ರಲ್ಲಿ ಜನಿಸಿದ ವೇದ್ ಮೆಹ್ತಾ ಮೂರು ವರ್ಷವಿರುವಾಗಲೇ ಕಣ್ಣುಗಳ ದೃಷ್ಟಿ ಕಳೆದುಕೊಂಡರು. ಆದರೆ, ಅಂಧತ್ವವನ್ನು ಮೀರಿ ಅವರು ತಮ್ಮ ವೃತ್ತಿಜೀವನನ್ನು ರೂಪಿಸಿಕೊಂಡರು.

15 ವರ್ಷವಿರುವಾಗಲೇ ಅಮೆರಿಕಕ್ಕೆ ಬಂದ ಮೆಹ್ತಾ ಅಲ್ಲಿಯೇ ನೆಲೆ ಕಂಡುಕೊಂಡರು. ಪೊಮೊನಾ ಕಾಲೇಜು, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನದ ಬಳಿಕ ತಮ್ಮ 26ನೇ ವಯಸ್ಸಿನಲ್ಲಿ ಬರಹಗಾರರಾಗಿ ಪತ್ರಿಕೆಗೆ ಸೇರಿಕೊಂಡರು. ಮೆಹ್ತಾ ತಮ್ಮ ಬರಹದಲ್ಲಿ ಭಾರತದ ರಾಜಕೀಯ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ವಿದ್ವತ್‌ಪೂರ್ಣ ಲೇಖನಗಳ ಸರಣಿಗಳನ್ನು ಬರೆದಿದ್ದಾರೆ.

ಆಧುನಿಕ ಭಾರತದ ಇತಿಹಾಸ ಕುರಿತು ಮೆಹ್ತಾ 12 ಸಂಪುಟಗಳ ಕೃತಿಗಳನ್ನು ಬರೆದಿದ್ದಾರೆ. ‘ವಾಕಿಂದ್ ದ ಇಂಡಿಯನ್ ಸ್ಟ್ರೀಟ್ಸ್‌’ (1960), ‘ಪೋರ್ಟ್ರೇಟ್ ಆಫ್ ಇಂಡಿಯಾ’ (1970), ‘ಮಹಾತ್ಮ ಗಾಂಧಿ ಮತ್ತು ಅಪೋಸ್ಟಲೆಸ್’ (1977) ಮೆಹ್ತಾ ಅವರ ಜನಪ್ರಿಯ ಕೃತಿಗಳು. ಇತಿಹಾಸದ ಜೊತೆಗೆ ತತ್ವಶಾಸ್ತ್ರ, ಭಾಷಾಶಾಸ್ತ್ರಕ್ಕೆ ಸಂಬಂಧಿಸಿದಂತೆಯೂ ಅವರು ಅನೇಕ ಸಂಶೋಧನಾ ಕೃತಿಗಳನ್ನು ರಚಿಸಿದ್ದಾರೆ. ‘ಡ್ಯಾಡೀಜಿ’ ಎಂಬುದು ಅವರ ಆತ್ಮಚರಿತ್ರೆಯ 12 ಸಂಪುಟಗಳ ಕೃತಿಶ್ರೇಣಿ. ಅವರಿಗೆ ಮ್ಯಾಕ್‌ ಆರ್ಥರ್ ಫೌಂಡೇಷನ್‌ನ ‘ಜೀನಿಯಸ್ ಗ್ರಾಂಟ್’ ಗೌರವ ಸೇರಿದಂತೆ ಅನೇಕ ಗೌರವ ಪುರಸ್ಕಾರಗಳು ದೊರೆತಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು