ಬುಧವಾರ, ಜನವರಿ 19, 2022
23 °C

ಇರಾಕ್: ಐಸಿಸ್‌ ಉಗ್ರರ ದಾಳಿ, 12 ಮಂದಿ ಸಾವು

ಎಪಿ Updated:

ಅಕ್ಷರ ಗಾತ್ರ : | |

Prajavani

ಇರ್ಬಿಲ್‌, ಇರಾಕ್‌: ಉತ್ತರ ಇರಾಕ್‌ನ ಗ್ರಾಮವೊಂದರ ಮೇಲೆ ಇಸ್ಲಾಮಿಕ್ ಸ್ಟೇಟ್‌ (ಐಸಿಸ್ಎ) ಉಗ್ರರು ನಡೆಸಿದ ದಾಳಿಯಲ್ಲಿ ಕುರ್ದಿಷ್‌ ಪಡೆಗಳ ಸೈನಿಕರು ಸೇರಿದಂತೆ 12 ಮಂದಿ ಮೃತಪಟ್ಟಿದ್ದಾರೆ ಎಂದು ಕುರ್ದಿಶ್‌ ಮಾಧ್ಯಮ ಶುಕ್ರವಾರ ವರದಿ ಮಾಡಿದೆ.

ಕುರ್ದಿಶ್‌ ಪೇಶ್ಮೆರ್ಗಾ ಪಡೆಯೊಂದಿಗಿನ ಸಂಘರ್ಷದಿಂದಾಗಿ ಐಸಿಸ್ ಉಗ್ರರು ಮಖ್‌ಮೌರ್‌ ಪ್ರದೇಶದ ಗ್ರಾಮವೊಂದರ ಮೇಲೆ ಗುರುವಾರ ತಡರಾತ್ರಿ ದಾಳಿ ನಡೆಸಿದ್ದಾರೆ. ಮೃತರಲ್ಲಿ ಒಂಬತ್ತು ಮಂದಿ ಕುರ್ದಿಶ್‌ ಪಡೆಯ ಸೈನಿಕರು ಮತ್ತು ಮೂವರು ನಾಗರಿಕರು ಸೇರಿದ್ದಾರೆ ಎಂದು ಖಾಸಗಿ ವಾಹಿನಿ ರುಡಾವ್‌ ತನ್ನ ವೆಬ್‌ಸೈಟ್‌ನಲ್ಲಿ ಹೇಳಿದೆ. 

ದಾಳಿಯ ಬಗ್ಗೆ ಉಗ್ರರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು