ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್ ಪ್ರಧಾನಿ ಚುನಾವಣೆ: ಅಂತಿಮ ಹಂತದಲ್ಲಿ ರಿಷಿ ಸುನಕ್– ಲಿಜ್ ಟ್ರುಸ್ ಪೈಪೋಟಿ

Last Updated 20 ಜುಲೈ 2022, 19:42 IST
ಅಕ್ಷರ ಗಾತ್ರ

ಲಂಡನ್: ಕನ್ಸರ್ವೇಟಿವ್ ಪಕ್ಷದ ನಾಯಕನ ಸ್ಥಾನ ಮತ್ತು ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ನಡೆದ ಕೊನೆಯ ಹಾಗೂ 5ನೇ ಹಂತದ ಚುನಾವಣೆಯಲ್ಲೂ ಗೆಲುವು ಸಾಧಿಸಿದ ಭಾರತ ಮೂಲದ ಬ್ರಿಟನ್ನಿನ ಮಾಜಿ ಹಣಕಾಸು ಸಚಿವ ರಿಷಿ ಸುನಕ್ ಅವರು ಅಂತಿಮ ಹಣಾಹಣಿಗೆ ಮೊದಲಿಗರಾಗಿ ಲಗ್ಗೆ ಇಟ್ಟಿದ್ದಾರೆ.

ಎರಡನೆಯವರಾಗಿ ಅಂತಿಮ ಹಣಾಹಣಿಗೆ ಪ್ರವೇಶ ಪಡೆದಿರುವ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರುಸ್ ಅವರ ವಿರುದ್ಧ ರಿಷಿ ಸುನಕ್, ಬ್ರಿಟನ್ ಪ್ರಧಾನಿ ಗಾದಿಗಾಗಿ ಪೈಪೋಟಿ ನಡೆಸಲಿದ್ದಾರೆ.

5ನೇ ಹಂತದ ಮತದಾನದ ಬಳಿಕ ರಿಷಿ ಸುನಕ್‌ಗೆ ಕನ್ಸರ್ವೇಟಿವ್ ಪಕ್ಷದಿಂದ 133 ಮತಗಳು ಬಿದ್ದರೆ, ಲಿಜ್ ಟ್ರುಸ್ 113 ಮತಗಳನ್ನು ಪಡೆದರು. ವಾಣಿಜ್ಯ ಸಚಿವರಾದ ಪೆನ್ನಿ ಮರ್ಡೌಂಟ್ 105 ಮತಗಳನ್ನು ಪಡೆದು ಪ್ರಧಾನಿ ರೇಸ್‌ನಿಂದ ಹೊರಬಿದ್ದರು.

ಪ್ರತೀ ಹಂತದ ಮತದಾನದಲ್ಲೂ ಮೊದಲ ಸ್ಥಾನ ಪಡೆದಿದ್ದ 42 ವರ್ಷದ ರಿಷಿ ಸುನಕ್ ಅವರು, ಮಂಗಳವಾರದ ಹೊತ್ತಿಗೆ ತಾವು ಪಡೆದಿದ್ದ 118 ಮತಗಳಿಗೆ ಬುಧವಾರ ಇನ್ನೂ 18 ಮತಗಳನ್ನು ಸೇರಿಸಿಕೊಂಡರು. ಈ ಮೂಲಕ ಕನ್ಸರ್ವೇಟಿವ್ ಪಕ್ಷದ ಮೂರನೇ ಒಂದಕ್ಕಿಂತ(120 ಮತ) ಅಧಿಕ ಮತಗಳನ್ನು(137 ಮತ) ಪಡೆದು ಮೊದಲಿಗರಾಗಿ ನಿರ್ಣಾಯಕ ಹಂತದಲ್ಲಿ ಸ್ಥಾನ ಭದ್ರಪಡಿಸಿಕೊಂಡರು.

ರಿಷಿ ಮತ್ತು ಲಿಜ್ ಟ್ರುಸ್ ಸೋಮವಾರ ಬಿಬಿಸಿಯಲ್ಲಿ ನೇರ ಪ್ರಸಾರವಾಗಲಿರುವ ಚರ್ಚೆಯಲ್ಲಿ ಭಾಗವಹಿಸುವ ಮೂಲಕ ಹೆಡ್ ಟು ಹೆಡ್ ಪೈಪೋಟಿ ಆರಂಭಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT